Tuesday, September 15, 2026

BDA Apartments

10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ: ‘ಇಲಿ’ರಾಯನ ಕರಾಮತ್ತಿಗೆ ಬೆಸ್ತುಬಿದ...
Home Front Page 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ: ‘ಇಲಿ’ರಾಯನ ಕರಾಮತ್ತಿಗೆ ಬೆಸ್ತುಬಿದ್ದ ಜ್ಯುವೆಲರಿ ಶಾಪ್‌ ಮಾಲೀಕ

10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ: ‘ಇಲಿ’ರಾಯನ ಕರಾಮತ್ತಿಗೆ ಬೆಸ್ತುಬಿದ್ದ ಜ್ಯುವೆಲರಿ ಶಾಪ್‌ ಮಾಲೀಕ

ತುಮಕೂರು, ಜುಲೈ, 30,2026 (www.justkannada.in): ಶೆಟರ್ ಒಡೆದಿಲ್ಲ. ಬೀಗ ಮುರಿದಿಲ್ಲ. ಕಳ್ಳನೂ ದರೋಡೆ ಮಾಡಿಲ್ಲ. ಆದರೂ ರಾತ್ರೋರಾತ್ರಿ ಜ್ಯೂವೆಲ್ಲರಿ ಶಾಪ್ ನಲ್ಲಿ  10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮಂಗಮಾಯವಾಗಿತ್ತು. ಈ ವೇಳೆ ಸಿಸಿಟಿವಿ ಪರಿಶೀಲಿಸಿದ ಮಾಲೀಕ ಅಚ್ಚರಿಯ ಕಳ್ಳನನ್ನ ನೋಡಿ ಬೆಸ್ತು ಬಿದ್ದಿದ್ದಾರೆ.

ಹೌದು, ತುಮಕೂರು ನಗರದಲ್ಲಿನ ವಿಶ್ವಾಸ್ ಜ್ಯುವೆಲರಿ ಶಾಪ್‌ ನಲ್ಲಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ 10 ಲಕ್ಷ ರೂ. ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಅಂಗಡಿಯಲ್ಲಿ 50 ಗ್ರಾಂಗೂ ಅಧಿಕ ತೂಕದ ವಜ್ರ ಹಾಗೂ ಚಿನ್ನಾಭರಣಗಳು ಬೆಳಗ್ಗೆ ನೋಡುವಾಗ ಕಾಣೆಯಾಗಿದ್ದವು. ಸರಗಳು ಮತ್ತು ಉಂಗುರಗಳು ಸೇರಿದಂತೆ ಸುಮಾರು 10 ಲಕ್ಷ ರೂ. ಮೌಲ್ಯದ ಆಭರಣಗಳು ನಾಪತ್ತೆಯಾಗಿದ್ದರಿಂದ ಮಾಲೀಕರು ಹಾಗೂ ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ BDA JK_Adv BDA Adv

ಈ ನಡುವೆ ಕಳ್ಳತನದ ಬಗ್ಗೆ   ಪೊಲೀಸರಿಗೆ ದೂರು ನೀಡುವ ಮೊದಲು ಜ್ಯೂವೆಲ್ಲರಿ ಶಾಪ್ ಮಾಲೀಕ ಅಂಗಡಿಯ ಸಿಸಿಟಿವಿ ದೃಶ್ಯಾವಳಿ ವೀಕ್ಷಿಸಿದ್ದು ಈ ವೇಳೆ ಇಲಿಯ ಕಳ್ಳತನದ ಕರಾಮತ್ತು ಬಯಲಾಗಿದೆ.

ಆಭರಣ ಎಗರಿಸಿದ್ದು ಇಲಿರಾಯ!

ಸಿಸಿಟಿವಿ ದೃಶ್ಯದಲ್ಲಿ ಒಂದು ಇಲಿ ಅಂಗಡಿಯೊಳಗೆ ಸದ್ದಿಲ್ಲದೆ ಓಡಾಡುತ್ತಿರುವುದು ಕಂಡುಬಂದಿದ್ದು. ಬಳಿಕ ಅದೇ ಇಲಿ ಚಿನ್ನಾಭರಣಗಳನ್ನು ಎಳೆದೊಯ್ದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಮಾರು 10 ಲಕ್ಷ ರೂ. ಮೌಲ್ಯದ ವಜ್ರ ಖಚಿತ ಚಿನ್ನಾಭರಣಗಳನ್ನು ಎಗರಿಸಿದ ಇಲಿ, ಅವುಗಳನ್ನು ತನ್ನ ಬಿಲದಲ್ಲಿ ಸಂಗ್ರಹಿಸಿಟ್ಟಿತ್ತು.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ: ‘ಇಲಿ’ರಾಯನ ಕರಾಮತ್ತಿಗೆ ಬೆಸ್ತುಬಿದ...

ಇಲಿಯ ಜಾಡು ಹಿಡಿದ ಜ್ಯುವೆಲರಿ ಶಾಪ್ ಸಿಬ್ಬಂದಿ, ಅದು ಸೇರಿಕೊಂಡಿದ್ದ ಬಿಲವನ್ನು ಪತ್ತೆಹಚ್ಚಿ ಬಳಿಕ ಬಿಲವನ್ನು ತೋಡಿದಾಗ ನಾಪತ್ತೆಯಾಗಿದ್ದ ಆಭರಣಗಳು ಅಲ್ಲಿ ಪತ್ತೆಯಾಗಿವೆ. ಬರೋಬ್ಬರಿ 10 ಉಂಗುರಗಳು ಹಾಗೂ 3 ಸರಗಳು ಬಿಲದಲ್ಲಿ ಪತ್ತೆಯಾಗಿದ್ದುಸದ್ಯ ಆಭರಣಗಳು ಸುರಕ್ಷಿತವಾಗಿ ವಾಪಸ್ ಸಿಕ್ಕ ಹಿನ್ನೆಲೆಯಲ್ಲಿ ಜ್ಯುವೆಲರಿ ಶಾಪ್ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.

Key words: Jewellery, stolen, Mouse, Tumkur