Monday, September 28, 2026

BDA Apartments

Home Front Page ಬಿಜೆಪಿ ಪ್ರತಿಭಟನೆಗೆ ಜೆಡಿಎಸ್ ಬೆಂಬಲ ವಿಚಾರ: ಹೆಚ್​.ಡಿ.ದೇವೇಗೌಡರು ತಮ್ಮ ನಿಲುವು ತಿಳಿಸಲಿ- ಡಿಸಿಎಂ ಡಿ.ಕೆ ಶಿವಕುಮಾರ್.

ಬಿಜೆಪಿ ಪ್ರತಿಭಟನೆಗೆ ಜೆಡಿಎಸ್ ಬೆಂಬಲ ವಿಚಾರ: ಹೆಚ್​.ಡಿ.ದೇವೇಗೌಡರು ತಮ್ಮ ನಿಲುವು ತಿಳಿಸಲಿ- ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ಜುಲೈ,20,2023(www.justkannada.in): ಶಾಸಕರ ಅಮಾನತು ಖಂಡಿಸಿ ಬಿಜೆಪಿ ನಡೆಸಿದ ಪ್ರತಿಭಟನೆಗೆ  ಜೆಡಿಎಸ್ ಬೆಂಬಲ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜೆಡಿಎಸ್ ನಿಲುವೇನು ಅಂತಾ ಇನ್ನೂ ಸ್ಪಷ್ಟವಾಗಿಲ್ಲ. ಹೆಚ್​.ಡಿ.ದೇವೇಗೌಡರು ತಮ್ಮ ನಿಲುವು ಏನು ಅಂತಾ ಹೇಳಲಿ ಎಂದು ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ವಿಧಾನಸಭೆಯಿಂದ ಬಿಜೆಪಿಯ 10 ಶಾಸಕರ ಅಮಾನತು ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರು ಹತಾಶೆಯಿಂದ ಗೂಂಡಾವರ್ತನೆ ತೋರಿದ್ದಾರೆ. ದಲಿತ ಡೆಪ್ಯುಟಿ ಸ್ಪೀಕರ್ ಮೇಲೆ ಪೇಪರ್ ಹರಿದು ಎಸೆದಿದ್ದಾರೆ. ಬಿಜೆಪಿಯವರು ಮಹಾಭಾರತ ನಾಟಕವನ್ನೇ ತೋರಿಸಿದ್ದಾರೆ ಎಂದರು.ಬಿಜೆಪಿ ಪ್ರತಿಭಟನೆಗೆ ಜೆಡಿಎಸ್ ಬೆಂಬಲ ವಿಚಾರ dks

ಬಿಜೆಪಿ ಪ್ರತಿಭಟನೆಗೆ ಜೆಡಿಎಸ್​ ನಾಯಕರ ಬೆಂಬಲ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್,  ಜೆಡಿಎಸ್ ನಿಲುವೇನು ಅಂತಾ ಇನ್ನೂ ಸ್ಪಷ್ಟವಾಗಿಲ್ಲ. ಹೆಚ್​.ಡಿ.ಕುಮಾರಸ್ವಾಮಿ ಮಾತ್ರ ಮಾತಾಡಿದ್ದಾರೆ. ಹೆಚ್​.ಡಿ.ದೇವೇಗೌಡರು ತಮ್ಮ ನಿಲುವು ಏನು ಅಂತಾ ಹೇಳಲಿ. ಹೆಚ್​​.ಡಿ.ದೇವೇಗೌಡರು, ಇಬ್ರಾಹಿಂ ಅವರ ಅಭಿಪ್ರಾಯ ತಿಳಿಸಿಲ್ಲ. ಎಂದು  ಹೇಳಿದರು.

Key words: JDS -support – BJP – HD Deve Gowda –  DCM -DK Shivakumar.