ಎರಡು ಜಿಲ್ಲೆಗಳನ್ನ ಬಿಟ್ಟು ಉಳಿದ ಎಲ್ಲಾ ಜಿಲ್ಲೆಗಳಲ್ಲಿ ನಾವು ಖಾತೆ ಓಪನ್ ಮಾಡುತ್ತೇವೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಹಾಸನ,ಮಾರ್ಚ್,16,2023(www.justkannada.in):  ಉಡುಪಿ, ದಕ್ಷಿಣ ಕನ್ನಡ ಎರಡು ಜಿಲ್ಲೆಗಳನ್ನ ಬಿಟ್ಟು ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಜೆಡಿಎಸ್ ಖಾತೆ ತೆರೆಯಲಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಅರಕಲಗೂಡು ಕ್ಷೇತ್ರದ ದೇವರಮುದ್ದನಹಳ್ಲಿ ಗ್ರಾಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ, ಚುನಾವಣೆಯ ದಿನಾಂಕ ಸಮೀಪಕ್ಕೆ ಬಂದಿದ್ದೇವೆ. ಈ ರಥಯಾತ್ರೆಯಲ್ಲಿ ಜನತೆಯಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಯಲ್ಲಿ ನಾವು ಅಕೌಂಟ್ ಓಪನ್ ಮಾಡೇ ಮಾಡುತ್ತೇವೆ. ಈ ಎರಡು ಜಿಲ್ಲೆಯಲ್ಲಿ ನಮಗೆ ಕಾರ್ಯಕರ್ತ ರ ಕೊರತೆ ಇದೆ. ಇದನ್ನ ಒಪ್ಪಿಕೊಳ್ಳಲೇಬೇಕು ಎಂದು ತಿಳಿಸಿದರು.

ಬಿಜೆಪಿಯವರು ಜೆಡಿಎಸ್ ಟೀಕಿಸುವುದನ್ನ ಬಿಟ್ಟು ತಮ್ಮ ಮನೆಯಲ್ಲಿ ಏನಾಗಿದೆ ಅಂತಾ ನೋಡಿಕೊಳ್ಳಲಿ. ನಮ್ಮನ್ನು ಟೀಕಿಸಲು ಹೋಗಿ ನೀವು 25 ಸ್ಥಾನಕ್ಕೆ ಇಳಿದುಬಿಟ್ಟಿರಾ..? ನಿಮ್ಮದು  ವಿಶ್ವಗುರು ಪಕ್ಷ ಅಲ್ಲವೇ..?  ಎಂದು ಲೇವಡಿ ಮಾಡಿದರು. ರಾಜ್ಯದ ಆರುವರೆ ಕೋಟಿ ಜನರ ಬೆಂಬಲ ನಮ್ಮ ಪಕ್ಷಕ್ಕೆ ಇದೆ. ಪಂಚರತ್ನ ರಥಯಾತ್ರೆ ವೇಳೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.

ಬಿಜೆಪಿಯ ಬೆಳೆವಣಿಗೆಯನ್ನು ನಾನು ಗಮನಿಸುತ್ತಿದ್ದೇನೆ. ಎರಡು ರಾಷ್ಟ್ರೀಯ ಪಕ್ಷಗಳ ಆಂತರಿಗೆ ಬೆಳವಣಿಗೆ ನನಗೆ ಸಂಬಂದ ಇಲ್ಲದಿದ್ದರೂ ಇವರ ಆಂತರಿಕ ಬೆಳವಣಿಗೆ ನಮ್ಮ ಗುರಿ ಮುಟ್ಟಲು ಅದೂ ಸಹಕಾರಿ ಆಗಲಿದೆ. ಇದು ನನ್ನ ರಾಜಕೀಯ ಲೆಕ್ಕಾಚಾರದ ವಿಶ್ಲೇಷಣೆ ಎಂದು ಹೇಳಿದರು.

 

Key words: jds-open -accounts – all districts –  Former CM -HD Kumaraswamy.