ಎಲ್ಲಾ ಗೊಂದಲ ಬಗೆಹರಿದಿದೆ: ವಿಜಯೇಂದ್ರ ಅವರ ಕೆಲಸದ ಬಗ್ಗೆ ಮಾತ್ರ ಗಮನ ಕೊಡಲಿ- ಸಚಿವ ಸೋಮಣ್ಣ ಕಿವಿಮಾತು.

ಬೆಂಗಳೂರು,ಮಾರ್ಚ್,16,2023(www.justkannada.in):  ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಅಸಮಾಧಾನಗೊಂಡು ನಿನ್ನೆಯಷ್ಟೆ ಪಕ್ಷದ ವರಿಷ್ಠರನ್ನ ಭೇಟಿಯಾಗಿದ್ದ ಸಚಿವ ಸೋಮಣ್ಣ ಇದೀಗ ಎಲ್ಲಾ ಗೊಂದಲ ಬಗೆಹರಿದಿರುವುದಾಗಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸೋಮಣ್ಣ,  ನಮ್ಮಲ್ಲಿ ಎಲ್ಲಾ ಗೊಂದಲ ಬಗೆಹರಿದಿದೆ. ಎಲ್ಲಾ ಸುಖಾಂತ್ಯವಾಗಿದೆ. ಬಿಎಸ್ ಯಡಿಯೂರಪ್ಪ ನನ್ನ ಗುರುಗಳು, ತಂದೆ ಸಮಾನರು. ನಾನೂ ಕೂಡ ಬಿಎಸ್ ವೈ ಗರಡಿಯಲ್ಲಿ ಬೆಳೆದಿದ್ದೇನೆ. ಬಿಎಸ್ ವೈಗೆ ಬಿಎಸ್ ವೈನೇ ಸಾಟಿ. ಸೋಮಣ್ಣಗೆ ಸೋಮಣ್ಣನೇ ಸಾಟಿ ಎಂದರು.

ವಿಜಯೇಂದ್ರ  ಯುವಕ. ಬೆಳೆಯೋದಕ್ಕೆ ಅವಕಾಶವಿದೆ  ವಿಜಯೇಂದ್ರ ಅವರ ಕೆಲಸದ ಬಗ್ಗೆ ಮಾತ್ರ ಗಮನ ಕೊಡಲಿ ಎಂಂದು ಸಚಿವ ಸೋಮಣ್ಣ ಕಿವಿಮಾತು ಹೇಳಿದರು.

Key words: All -confusion – resolved- Minister -Somanna