ಜೆಡಿಎಸ್​​ ನಿಂದ 10-12 ಶಾಸಕರಲ್ಲ ಒಬ್ಬರೂ ಬಿಟ್ಟು ಹೋಗಲ್ಲ- ಶಾಸಕ ಜಿಟಿ ದೇವೇಗೌಡ

ಬೆಂಗಳೂರು,ಆಗಸ್ಟ್,18,2023(www.justkannada.in): ಜೆಡಿಎಸ್ ಮತ್ತು ಬಿಜೆಪಿಯಿಂದ 10 ರಿಂದ 15 ಶಾಸಕರು ಕಾಂಗ್ರೆಸ್ ಸೇರ್ತಾರೆ ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಜಿ.ಟಿ ದೇವೇಗೌಡ,  ಜೆಡಿಎಸ್​​ನಿಂದ 10-12 ಶಾಸಕರಲ್ಲ, ಒಬ್ಬರೂ ಬಿಟ್ಟು ಹೋಗಲ್ಲ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್​ ಶಾಸಕ ಜಿ.ಟಿ.ದೇವೇಗೌಡ,  ಪಕ್ಷ ಸಂಘಟನೆ ಬಗ್ಗೆ ಎಲ್ಲಾ ನಾಯಕರು ಗಮನ ಕೊಡಬೇಕು ಎಂದರು. ಜೆಡಿಎಸ್ ವಿವಿಧ ಪದಾಧಿಕಾರಿಗಳು ಹೊಸದಾಗಿ ನೇಮಕ ಮಾಡಿ ಪಕ್ಷಕ್ಕೆ ಹೊಸ ಸ್ಪರ್ಶ ನೀಡಲು ಕೆಲಸ ಮಾಡುತ್ತೇವೆ ಎಂದರು. ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ರಾಯರೆಡ್ಡಿ ಹೇಳಿದ್ದಾರೆ. ಹೀಗಾಗಿ ಆಪರೇಷನ್ ಹಸ್ತದ ಬಗ್ಗೆ ಕಾಂಗ್ರೆಸ್​ನವರು ಮಾತನಾಡುತ್ತಿದ್ದಾರೆ ಎಂದರು.

Key words: JDS -MLAs –  not- leave – party-MLA GT Deve Gowda.