Wednesday, July 29, 2026

BDA Apartments

Home Front Page ಸಿಎಂ ಹೆಚ್.ಡಿಕೆಗೆ ಸರಿಯಾಗಿ ಆಡಳಿತ ನಡೆಸಲು ಬಿಟ್ಟಿಲ್ಲ – ಸದನದಲ್ಲಿ ಬಿಜೆಪಿ ವಿರುದ್ದ ಕಿಡಿಕಾರಿದ...

ಸಿಎಂ ಹೆಚ್.ಡಿಕೆಗೆ ಸರಿಯಾಗಿ ಆಡಳಿತ ನಡೆಸಲು ಬಿಟ್ಟಿಲ್ಲ – ಸದನದಲ್ಲಿ ಬಿಜೆಪಿ ವಿರುದ್ದ ಕಿಡಿಕಾರಿದ ಶಾಸಕ ಶಿವಲಿಂಗೇಗೌಡ…

ಬೆಂಗಳೂರು,ಜು,19,2019(www.justkannada.in):ಸಿಎಂ ಹೆಚ್.ಡಿಕೆಗೆ ಸರಿಯಾಗಿ ಆಡಳಿತ ನಡೆಸಲು ಬಿಟ್ಟಿಲ್ಲ.  ಹಾಗೆಯೇ 15 ಅತೃಪ್ತ ಶಾಸಕರ ಕ್ಷೇತ್ರಕ್ಕೆ ನೀಡುರುವ ಅನುದಾನದ ಬಗ್ಗೆ ಬಹಿರಂಗಪಡಿಸಲಿ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ತಿಳಿಸಿದರು.

ವಿಧಾನಸಭೆಯಲ್ಲಿ ಇಂದು ಮಾತನಾಡಿದ ಶಾಸಕ ಶಿವಲಿಂಗೇಗೌಡ, ಸಿಎಂ ಹೆಚ್.ಡಿ ಕುಮಾರಸ್ವಾಮಿ ಒಂದು ವರ್ಷದಿಂದ ಸರ್ಕಾರ ಸುಗಮವಾಗಿ ನಡೆಯಲು ಬಿಡಲಿಲ್ಲ.  ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಕೊಡಬಾರದ ಕಾಟ ಕೊಟ್ಟಿದ್ದೀರಿ.  ಸರಿಯಾಗಿ ಆಡಳಿತ ನಡೆಸಲು ಬಿಟ್ಟಿಲ್ಲ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.

ಶಾಸಕರ ರಾಜೀನಾಮೆ ಅಂಗೀಕಾರವಾಗಿಲ್ಲ. ಹೀಗಾಗಿ ನಮಗೆ ಸದನದಲ್ಲಿ ಸರ್ಕಾರಕ್ಕೆ ಸಂಖ್ಯಾಬಲ ಕಡಿಮೆಯಾಗಿಲ್ಲ. ಸರ್ಕಾರ ಅಸ್ಥಿರಗೊಳಿಸಲ್ಲ ಎಂದಿದ್ರಿ. ಈಗ ಏಕೆ ಮಾಡಿದ್ರಿ. ವಾಮಮಾರ್ಗ ಮೂಲಕ ಖುರ್ಚಿ ಹಿಡಿಯಲು ಹೊರಟಿದ್ದೀರಿ. ಬಿಎಸ್ ವೈ ಸಿಎಂ ಆಗಿದ್ದಾಗ  ಅಪರೇಷನ್ ಕಮಲ ಮಾಡಿದ್ರು.  ಸಚಿವ ಸ್ಥಾನ ಅಮಿಷವೊಡ್ಡಿ ಶಾಸಕರಿಗೆ ರಾಜೀನಾಮೆ ನೀಡಿಸಿದ್ರು. ಅವಾಗ ಬಿಎಸ್ ವೈ ಅಂದಿನ ಸರ್ಕಾರ ಮಾಡಿದ್ದು ಸರಿಯೇ..? ಎಂದು ಪ್ರಶ್ನಿಸಿದರು.

ವಿಶ್ವಣ್ಣ  ಅವರ ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ಅಂತಾ ಅವರೇ ಆತ್ಮಸಾಕ್ಷಿಯಾಗಿ ಹೇಳಲಿ. 15 ಅತೃಪ್ತ ಶಾಸಕರ ಕ್ಷೇತ್ರಕ್ಕೆ ನೀಡುವ ಅನುದಾನದ ಬಗ್ಗೆ ಚರ್ಚೆಯಾಗಲಿ ಎಂದ ಶಿವಲಿಂಗೇಗೌಡರು,  ಶ್ರೀಮಂತಪಾಟೀಲ್ ಅವರನ್ನ ಆಸ್ಪತ್ರೆಗೆ ಸೇರಿಸಿದ್ದ ಬಗ್ಗೆ ತನಿಖೆಯಾಗಲಿ.  15 ಶಾಸಕರನ್ನ ಹಾಗೆಯೇ ಮಲಗಿಸಬೇಕಿತ್ತು. ಈಬಗ್ಗೆ ಚರ್ಚೆ ನಡೆದು ಸದನದಲ್ಲೇ ನಿರ್ಣಯವಾಗಲಿ ಎಂದರು.

Key words: jds mla-Shivalinga Gowda-outrage against- BJP -session