Friday, August 14, 2026

BDA Apartments

Home Front Page ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ನಿವಾಸಕ್ಕೆ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಭೇಟಿ.

ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ನಿವಾಸಕ್ಕೆ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಭೇಟಿ.

ತುಮಕೂರು,ನವೆಂಬರ್,8,2022(www.justkannada.in):  ರಾಜ್ಯಸಭೆ ಚುನಾವಣೆ ವೇಳೆ ಅಡ್ಡಮತದಾನ ಆರೋಪದಲ್ಲಿ ಜೆಡಿಎಸ್ ಪಕ್ಷದಿಂದ ಉಚ್ಚಾಟನೆಗೊಂಡಿರುವ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್ ಶ್ರೀನಿವಾಸ್ ನಿವಾಸಕ್ಕೆ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತುಮಕೂರು ವಿದ್ಯಾನಗರದಲ್ಲಿರುವ  ಶಾಸಕ ಎಸ್.ಆರ್ ಶ್ರೀನಿವಾಸ್  ನಿವಾಸಕ್ಕೆ ಶಾಸಕ ಸಾರಾ ಮಹೇಶ್ ಭೇಟಿ ನೀಡಿದ್ದಾರೆ.  ಆದರೆ ಶ್ರೀನಿವಾಸ್ ಮನೆಯಲ್ಲಿ ಇರಲಿಲ್ಲ.

ಶಾಸಕ ಸಾರಾ ಮಹೇಶ್ ರನ್ನ ಶ್ರೀನಿವಾಸ್ ಪುತ್ರ ದುಷ್ಯಂತ್ ಅವರು  ಸ್ವಾಗತಿಸಿದರು. ಸಾರಾ ಮಹೇಶ್ ಗೆ ಎಂಎಲ್ ಸಿ ದಿನೇಶ್ ಗೂಳಿಗೌಡ ಸಾಥ್ ನೀಡಿದ್ದಾರೆ.  ಎಸ್.ಆರ್  ಶ್ರೀನಿವಾಸ್ ಪತ್ನಿ ಭಾರತಿ ಮತ್ತು ಪುತ್ರ ದುಷ್ಯಂತ್ ಜೊತೆ ಸಾ.ರಾ ಮಹೇಶ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

Key words: JDS MLA -Sa Ra Mahesh -visits -Gubbi MLA –S.R Srinivas- residence.