Tuesday, September 29, 2026

BDA Apartments

ಚಳಿಗಾಲದ ಅಧಿವೇಶನದಲ್ಲಿ ಯಾವುದೇ ಭತ್ಯೆ ಬೇಡ-ಸ್ಪೀಕರ್ ಗೆ JDS ಶಾಸಕ ಪತ್ರ BDA JK_Adv BDA...
Home Front Page ಚಳಿಗಾಲದ ಅಧಿವೇಶನದಲ್ಲಿ ಯಾವುದೇ ಭತ್ಯೆ ಬೇಡ-ಸ್ಪೀಕರ್ ಗೆ JDS ಶಾಸಕ  ಪತ್ರ

ಚಳಿಗಾಲದ ಅಧಿವೇಶನದಲ್ಲಿ ಯಾವುದೇ ಭತ್ಯೆ ಬೇಡ-ಸ್ಪೀಕರ್ ಗೆ JDS ಶಾಸಕ  ಪತ್ರ

ಬೆಂಗಳೂರು,ನವೆಂಬರ್,12,2025 (www.justkannada.in):  ಚಳಿಗಾಲದ ಅಧಿವೇಶನದಲ್ಲಿ ನನಗೆ ಯಾವುದೇ ಭತ್ಯೆ ಬೇಡ ಎಂದು ಸ್ಪೀಕರ್ ಗೆ ಜೆಡಿಎಸ್ ಶಾಸಕ ಶಾಸಕ ಶರಣಗೌಡ ಕಂದುಕೂರು  ಪತ್ರ ಬರೆದಿದ್ದಾರೆ.

ಸ್ಪೀಕರ್ ಯುಟಿ ಖಾದರ್ ಅವರಿಗೆ ಪತ್ರ ಬರೆದಿರುವ ಯಾದಗಿರಿ ಜಿಲ್ಲೆಯ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಯಾವುದೇ ಭತ್ಯೆ ಪಡೆಯುವುದಿಲ್ಲ. ಹೊರಗಿನಿಂದ ಊಟ ವಸ್ತುಗಳನ್ನು ತಂದು ಬಳಕೆಗೆ ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ.ಚಳಿಗಾಲದ ಅಧಿವೇಶನದಲ್ಲಿ ಯಾವುದೇ ಭತ್ಯೆ ಬೇಡ sharanagowda

ಕಳೆದ ಬಾರಿಯ ಅಧಿವೇಶನದಲ್ಲಿ ನಾನು ಭತ್ಯೆ ಪಡೆಯಲ್ಲ ಅಂತ ಶಾಸಕ ಶರಣಗೌಡ ಕಂದಕೂರು ಹೇಳಿದ್ದರು. ಉತ್ತರ ಕರ್ನಾಟಕ ಭಾಗದ ಸಮಸ್ಯೆಯ ಬಗ್ಗೆ ಚರ್ಚಿಸಲು 25 ರಿಂದ 30 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ.

ಕಳೆದ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಇದುವರೆಗೂ ತಿಳಿಸಿಲ್ಲ. ಮಳೆ, ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಪರಿಹಾರ ಸಿಕ್ಕಿಲ್ಲ. ಶಾಸಕರು ಅನುದಾನ ತಂದು ಹೊಸ ಕೆಲಸ ಮಾಡುತ್ತಾರೆ ಅಂತ ಅಂದುಕೊಳ್ಳುತ್ತಾರೆ. ಸಮಯ ಸಿಕ್ಕಾಗ ಕೇವಲ ಮಾತನಾಡಿ ಕಾಡಿಬೇಡಿ ಹೋಗುವುದೇ ಆಗಿದೆ. ಹೀಗಾಗಿ ರಾಜ್ಯ ಸರ್ಕಾರ ನೀಡುವ ಭತ್ಯೆ ಪಡೆಯದಿರಲು ನಿರ್ಧರಿಸಿದ್ದೇನೆ ಎಂದು ಪತ್ರದಲ್ಲಿ ಶಾಸಕ ಶರಣಗೌಡ ಕಂದಕೂರ  ತಿಳಿಸಿದ್ದಾರೆ.

Key words: No allowance, during, winter session, JDS, MLA, letter, Speaker