Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಕನಿಷ್ಠ 10 ಸ್ಥಾನಗಳನ್ನಾದ್ರೂ ಈ ಉಪ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ-ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ…

ಕನಿಷ್ಠ 10 ಸ್ಥಾನಗಳನ್ನಾದ್ರೂ ಈ ಉಪ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ-ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ…

ಮೈಸೂರು,ಸೆ,21,2019(www.justkannada.in):  ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ 10 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಉಪಚುನಾವಣೆಯಲ್ಲಿ ಕನಿಷ್ಠ IO ಸ್ಥಾನಗಳನ್ನಾದ್ರೂ ಈ ಉಪ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದರು.

ಚಿಂತನ ಮಂಥನ ಸಭೆಯಲ್ಲಿ ಮಾಜಿ ಸಚಿವ ಜಿ.ಟಿ ದೇವೇಗೌಡರಿಗೆ ಪರೋಕ್ಷ ಟಾಂಗ್ ನೀಡಿದ ಹೆಚ್.ಡಿಕೆ ನೀವು  ಉಳಿದರೆ ಮಾತ್ರ  ಪಕ್ಷ ಉಳಿಯುತ್ತೆ., ನನ್ನನ್ನು ಸೇರಿದಾಗೆ ನಿಮ್ಮಂತ ಲಕ್ಷಾಂತರ ಕಾರ್ಯಕರ್ತರು ಇದ್ರೆ ಮಾತ್ರ  ಉಳಿದುಕೊಳ್ಳೋಕೆ ಸಾಧ್ಯ. ಉಪ ಚುನಾವಣೆಯ ಮೂಲಕ ಸರ್ಕಾರದ ಅಳಿವು ಉಳಿವು ಗೊತ್ತಾಗಲಿದೆ. ಈ  ಸರ್ಕಾರ ನಡೆಯಲು ಸಾಧ್ಯವಿಲ್ಲ. ಸರ್ಕಾರದ ನಂಬರ್ ನೋಡಿದ್ರೆ ಗೊತ್ತಾಗತ್ತೆ ಎಂದು ಭವಿಷ್ಯ ನುಡಿದರು.

ಬಿಜೆಪಿಯವರು ಹಣದ ಮೂಲಕ  ಜನರನ್ನ ಕೊಂಡುಕೊಳ್ಳಲು ಹೋಗಿದ್ದಾರೆ. ನಾವು ಎಂದು ಬಿಜೆಪಿ ಅವರನ್ನ ಹಣ ಕೊಟ್ಟು ಕರೆಸಿಕೊಂಡು ಸರ್ಕಾರ ಬೀಳಿಸಲ್ಲ. ಬಿಜೆಪಿಯ ಭದ್ರಕೋಟೆಯಲ್ಲೇ ನಿನ್ನೆ ಜಗದೀಶ್ ಶೆಟ್ಟರ್ ಗೆ ಜನ ಘೇರಾವ್ ಹಾಕಿದ್ದಾರೆ. ಉಪ ಚುನಾವಣೆಯಲ್ಲಿ ಯಾವುದೇ ಹೊಂದಾಣಿಕೆ ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದೇವೆ. ಕಳೆದ ಲೋಕಸಭಾ ಚುನಾವಣೆಯಲ್ಲೇ ಫ್ರೆಂಡ್ಲಿ ಫೈಟ್ ಮಾಡೋಣ ಅಂದುಕೊಂಡೆವು ಆದ್ರೆ ಕೆಲವು ನಾಯಕರ  ಮಾತಿನಿಂದ ಅದು ಸಾಧ್ಯವಾಗಲಿಲ್ಲ ಎಂದರು.

ಇದೇ ವೇಳೆ ಪ್ರಧಾನಿ ಮೋದಿ ವಿರುದ್ದ ಕಿಡಿಕಾರಿದ ಹೆಚ್.ಡಿ ಕುಮಾರಸ್ವಾಮಿ, ಮೋದಿ ಅಮೇರಿಕಾ ರಷ್ಯಾಕ್ಕೆ  ಅಲ್ಲಿನ  ಚುನಾವಣಾ ದೃಷ್ಟಿಯಿಂದ ಹಣ ಖರ್ಚು ಮಾಡ್ಕೊಂಡ್ ಹೋಗ್ತಾರೆ. ಆದ್ರೆ  ಇಲ್ಲಿ ಜನ  ಸಂಕಷ್ಟದಲ್ಲಿ ಒಂದು ಬಿಡುಗಾಸನ್ನು ಕೊಟ್ಟಿಲ್ಲ. ಅಮೇರಿಕಾದಲ್ಲಿ  ಮುಂದಿನ ವರ್ಷ ಅಧ್ಯಕ್ಷರ ಚುನಾವಣೆ ಬರಲಿದೆ. ಹೀಗಾಗಿ ಅಮೇರಿಕಾ ದೇಶದಲ್ಲಿ ಹೆಚ್ಚಿನ ಭಾರತೀಯ ಮತದಾರರು ಇದ್ದಾರೆ ಅವರಿಗೋಸ್ಕರ ದುಡ್ಡ್ ಖರ್ಚ್ ಮಾಡ್ಕೊಂಡ್ ಹೋಗ್ತಾರೆ ಎಂದು ಲೇವಡಿ ಮಾಡಿದರು.

Key words: jds-by-election -10 seats-Former CM HD Kumaraswamy