ಮಾಧವನ್ ಸಿನಿಮಾಗೆ ದನಿಯಾದ ಜೆಕೆ !

ಬೆಂಗಳೂರು, ಡಿಸೆಂಬರ್ 11, 2020 (www.justkannada.in): ಆರ್.ಮಾಧವನ್ ಅಭಿನಯದ ಚಿತ್ರದ ಕನ್ನಡ ಅವತರಣಿಕೆಗೆ ನಟ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ಧ್ವನಿ ನೀಡಿದ್ದಾರೆ.

ಹೌದು. ಬಹುಭಾಷಾ ನಟ ಆರ್.ಮಾಧವನ್ ಸಿನಿಮಾಗೆ ದನಿಯಾಗಿದ್ದಾರೆ ಜೆಕೆ !

ಮಾಧವನ್-ಶ್ರದ್ಧಾ ಶ್ರೀನಾಥ್ ಅಭಿನಯದ ‘ಮಾರಾ’ ಸಿನಿಮಾ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಮಾಧವನ್ ಗೆ ಜೆಕೆ ಧ್ವನಿ ನೀಡಿದ್ದಾರೆ.