ಕಾರು-ಬೈಕ್ ಮುಖಾಮುಖಿ ಡಿಕ್ಕಿ : ಒಂದೇ ಕುಟುಂಬದ ಮೂವರು ಸಾವು

ಮೈಸೂರು,ಡಿಸೆಂಬರ್,11,2020(www.justkannada.in) : ಕಾರು- ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

logo-justkannada-mysore

ಮೈಸೂರು- ಬೆಂಗಳೂರು ರಸ್ತೆ ರಿಂಗ್‌ರೋಡ್ ಜಂಕ್ಷನ್ ಬಳಿ ಘಟನೆ ನಡೆದಿದೆ. ರಮೇಶ್(೪೦), ಉಷಾ(೩೬), ಮೋನಿಷಾ(೫) ಮೃತ ದುರ್ದೈವಿಗಳು. ಸಿದ್ದಾರ್ಥ್(೩) ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ.

ಮೃತರು ಮೈಸೂರಿನ ಟಿ.ಕೆ.ಲೇಔಟ್ ನಿವಾಸಿಗಳಾಗಿದ್ದು,  ಇಬ್ಬರು ಮಕ್ಕಳೊಂದಿಗೆ ಉಷಾ ತವರೂರಾದ ಸಿದ್ದಲಿಂಗಪುರದಿಂದ ಹೋಗಿದ್ದರು. ಸಿದ್ದಲಿಂಗಪುರದಿಂದ ನಿನ್ನೆ ತಡರಾತ್ರಿ ವಾಪಸ್ ಬರುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

key words : Car-bike-collision-three-deaths-single-family