ನಾಳೆ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡುವಂತೆ ಸೂಚನೆ…

ಬೆಂಗಳೂರು,ಮಾ,21,2020(www.justkannada.in):  ಕೊರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದು ಈ ನಡುವೆ ಪ್ರಧಾನಿ ನರೇಂದ್ರ ಮೋದಿ ನಾಳೆ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ.

ನಾಳೆ ಬೆಳಿಗ್ಗೆ 7 ರಿಂದ ರಾತ್ರಿವರೆಗೆ ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಓಲಾ ಊಬರ್ ಸಂಘಟನೆ, ಹೋಟೆಲ್ ಮಾಲೀಕರ ಸಂಘ, ವೈನ್ಸ್ ಅಂಡ್ ಬಾರ್ ಅಸೋಷಿಯೇಷನ್, ಬೀದಿಬದಿ ವ್ಯಾಪಾರಿಗಳ ಸಂಘಟನೆ ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿದ್ದು ನಾಳೆ ಎಲ್ಲಾ ಬಂದ್ ಆಗಲಿದೆ.

ಇದೀಗ ಜನತಾ ಕರ್ಫ್ಯೂಗೆ ಬೆಂಬಲ ನೀಡಿರುವ ಐಎಂಎ ನಾಳೆ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡುವಂತೆ ಸೂಚನೆ ನೀಡಿದೆ. ಅಲ್ಲದೆ ತುರ್ತು ಚಿಕಿತ್ಸೆಗಳನ್ನ ಮಾತ್ರ ನೀಡುವಂತೆ ಐಎಂಎ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದೆ. ಹೀಗಾಗಿ ನಾಳೆ ಒಪಿಡಿ ಬಂದ್ ಆಗಲಿದೆ.

Key words: janatha curfew- Instructions –  OPD –Bandh-private hospitals –tomorrow