ಜಮ್ಮು-ಕಾಶ್ಮೀರ: ಗಡಿ ಭದ್ರತಾ ಪಡೆ, ಉಗ್ರರ ನಡುವೆ ಗುಂಡಿನ ಚಕಮಕಿ

ಶ್ರೀನಗರ, ಫೆಬ್ರವರಿ 22, 2020 (www.justkannada.in): ಅನಂತನಾಗ್ ಜಿಲ್ಲೆಯ ಸಂಗಮ್ ಎಂಬಲ್ಲಿ ಇಂದು ಮುಂಜಾನೆಯ ವೇಳೆಯಲ್ಲಿ ಗಡಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಈ ವೇಳೆ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಭಾರತೀಯ ಗಡಿ ಭದ್ರತಾ ಪಡೆ ಹತ್ಯೆಗೈದಿದೆ. ಕಳೆದ ನಿನ್ನೆಯಿಂದ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸಂಗಮ್ ಎಂಬಲ್ಲಿ ಗುಂಡಿನ ಚಕಮಕಿ ಆರಂಭಗೊಂಡಿತ್ತು. ಇಂದು ಮುಂಜಾನೆ ತೀವ್ರ ಸ್ವರೂಪಕ್ಕೂ ಇಳಿದಿತ್ತು.

ಈ ವೇಳೆ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಇಬ್ಬರು ಸದಸ್ಯರನ್ನು ಹತ್ಯೆ ಗೈಯುವಲ್ಲಿ ಉಗ್ರ ನಿಗ್ರಹ ಪಡೆ ಯಶಸ್ವಿಯಾಗಿದೆ. ಈ ಮೊದಲು ಎರಡು ದಿನಗಳ ಹಿಂದೆ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಹಿಜಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮೂವರು ಉಗ್ರರನ್ನು ಭದ್ರತಾ ಪಡೆಗಳು ಎನ್ ಕೌಂಟರ್ ಮಾಡಿ ಹತ್ಯೆ ಗೈದಿದ್ದವು.