ಹು-ಧಾ ಸೆಂಟ್ರಲ್ ಕ್ಷೇತ್ರ ಬಿಜೆಪಿ ಭದ್ರಕೋಟೆ: ಶೆಟ್ಟರ್ ಗೆ ಜನ ತಕ್ಕ ಪಾಠ ಕಲಿಸ್ತಾರೆ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿ.

ಬೆಂಗಳೂರು,ಏಪ್ರಿಲ್,18,2023(www.justkannada.in): ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ಜಗದೀಶ್ ಶೆಟ್ಟರ್ ಗೆ ಜನರು ತಕ್ಕ ಪಾಠ ಕಲಿಸ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ.

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಕುರಿತು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೇವಲ ಶಾಸಕ ಸ್ಥಾನಕ್ಕಾಗಿ ಕಾಂಗ್ರೆಸ್ ಸೇರಿದ್ದು ಎಷ್ಟು ಸರಿ..? ಕಾಂಗ್ರೆಸ್ ವಿರೋಧಿಸುತ್ತಿದ್ದವರೇ  ಇಂದು ಆ ಪಕ್ಷಕ್ಕೆ ಹೋಗಿದ್ದಾರೆ. ಧ್ವಜ ಬದಲಾದಂತೆ ಆಲೋಚನೆ ಬದಲಾಗುತ್ತಾ..? ಶೆಟ್ಟರ್ ಕಾಂಗ್ರೆಸ್ ಸೇರಿರೋದು ಬೇಸರ ತರಿಸಿದೆ ಎಂದರು.

ಬಿ.ಎಲ್ ಸಂತೋಷ್ ಎಂದಿಗೂ ಜಗದೀಶ್ ಶೆಟ್ಟರ್ ವಿರೋಧಿಯಲ್ಲ . ಸಂತೋಷ ಅವರು ಶಾಸಕರಾಗಿಲ್ಲ ಸಂಸದರಾಗಿಲ್ಲ. ಯಾವುದೇ ಸ್ಪರ್ಧೆ ಮಾಡುತ್ತಿಲ್ಲ. ಇಷ್ಟು ವರ್ಷ ಸಂತೋಷ್ ಕೆಲಸ  ಮಾಡಿದ್ದು ಪಕ್ಷ ಸಂಘಟನೆಗಾಗಿ.  ಸಂತೋಷ್ ಅವರು ಒಂದು ವಿಚಾರದಿಂದ  ಬಂದಿದ್ದಾರೆ. ಆ ವಿಚಾರದಿಂದ ಬಂದವರನ್ನ ಗೆಲ್ಲಿಸಬೇಕು ಅನ್ನೊದು ಅವರ  ಉದ್ದೇಶ ಎಂದು ಶೋಭಾ ಕರಂದ್ಲಾಜೆ ಹೇಳಿದರು.

Key words: Jagadish shetter-join-congress-central minister-Shoba karandlaje