ಶೆಟ್ಟರ್ ಗೆ ಜನಮನ್ನಣೆ ಇರಲಿಲ್ಲ: ಬಿಜೆಪಿಗೆ ಹೋಗಿದ್ರಿಂದ ಲಾಭ, ನಷ್ಟ ಇಲ್ಲ-ಸಚಿವ ಡಾ.ಜಿ.ಪರಮೇಶ್ವರ್.

ಬೆಂಗಳೂರು,ಜನವರಿ,26,2024(www.justkannada.in): ಕಾಂಗ್ರೆಸ್ ತೊರೆದು ಮತ್ತೆ ವಾಪಸ್ ಬಿಜೆಪಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಾ.ಜಿ.ಪರಮೇಶ್ವರ್, ಜಗದೀಶ್ ಶೆಟ್ಟರ್ ಗೆ ಜನಮನ್ನಣೆ ಇರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಶೆಟ್ಟರ್ ಸೋತರು. ಸಿಎಂ ಆಗಿದ್ದವರು ಸೋಲಬಾರದಿತ್ತು. ಸೋತರೂ ನಾವು ಪರಿಷತ್ ಸ್ಥಾನ ಕೊಟ್ಟಿದ್ದವು.   ಬೆದರಿಕೆ ಇದೆಯೋ ಒತ್ತಡ ಇದೆಯೋ ಗೊತ್ತಿಲ್ಲ. ದೀಢರ್  ಬಿಜೆಪಿಗೆ ಹೋದರು. ಇದರಿಂದ ಲಾಭವೂ ಇಲ್ಲ ನಷ್ಟವೂ ಇಲ್ಲ ಎಂದು ತಿಳಿಸಿದರು.

Key words: Jagadish Shettar – going – BJP – Minister- Dr. G. Parameshwar.