ನಾನು ಕಟ್ಟಿದ ಮನೆ ಬಿಜೆಪಿ, ಇಲ್ಲೇ ಕೆಲಸ ಮಾಡುತ್ತೇನೆ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮರ್ಥನೆ.

ಬೆಂಗಳೂರು,ಜನವರಿ,26,2024(www.justkannada.in):  ನಿನ್ನೆ ದಿಢೀರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದನ್ನ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಜಗದೀಶ್ ಶೆಟ್ಟರ್,   ನನ್ನ ನಿರ್ಧಾರದಲ್ಲಿ ತಪ್ಪಿಲ್ಲ. ರಾಜಕೀಯವಾಗಿ ಇದೆಲ್ಲ ಆಗುತ್ತೆ. ಆಗಿನ ವಸ್ತು ಸ್ಥಿತಿ ಬೇರೆ ಇತ್ತು. ಈಗಿನ ವಸ್ತುಸ್ಥಿತಿ ಬೇರೆ ಇದೆ. ನಾನು ವಾಪಸ್ ಬರಲು ವಿಜಯೇಂದ್ರ, ಬಿಎಸ್ ವೈ ಕೈಜೋಡಿಸಿದರು. ಅಂದು  ಅವಮಾನ ಆಗಿ ಪಕ್ಷ ಬಿಟ್ಟಿದ್ದೆ. ವರಿಷ್ಠರು ಎಲ್ಲವನ್ನು ತೀರ್ಮಾನ ಮಾಡಿದ್ದಾರೆ.  ನಾನು ಕಟ್ಟಿದ ಮನೆ ಬಿಜೆಪಿ ಇಲ್ಲೇ ಕೆಲಸ ಮಾಡುತ್ತೇನೆ ಎಂದರು.

ಬಿಎಲ್ ಸಂತೋಷ್ ಕುರಿತ ಹೇಳಿಕೆಗೆ ನಾನು ಈಗಲೂ ಬದ್ದ. ಸ್ಥಳೀಯ ಮಟ್ಟದಲ್ಲಿ ಅನುಕಂಪ ತೋರಿಸದಿದ್ದರೇ ನಾನು ಬಿಜೆಪಿಗೆ ವಾಪಸ್ ಬರುತ್ತಿರಲಿಲ್ಲ. ವಿಧಾನಸಭೆ  ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೋಗಿದ್ದಕ್ಕೆ ಅವರಿಗೆ ಲಾಭ ಆಗಿದೆ. ಅದು ಅವರಿಗೂ ಗೊತ್ತು. ಮತ್ತೆ ಬಿಜೆಪಿ ಸೇರ್ಪಡೆಯಾಗಿದ್ದಕ್ಕೆ ಯಾವುದೇ ಮುಜುಗರ ಇಲ್ಲ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

Key words:  bjp-join-Former CM-Jagadish shetter