Sunday, September 13, 2026

BDA Apartments

ಸಚಿವ ಶ್ರೀರಾಮುಲು ಮಾಜಿ ಶಾಸಕ ಸುರೇಶ್ ಬಾಬು ಆಪ್ತರ ಮನೆ, ಕಚೇರಿ ಮೇಲೆ ಐಟಿ ದಾಳ...
Home Front Page ಸಚಿವ ಶ್ರೀರಾಮುಲು ಮಾಜಿ ಶಾಸಕ ಸುರೇಶ್ ಬಾಬು ಆಪ್ತರ ಮನೆ, ಕಚೇರಿ ಮೇಲೆ ಐಟಿ ದಾಳಿ.

ಸಚಿವ ಶ್ರೀರಾಮುಲು ಮಾಜಿ ಶಾಸಕ ಸುರೇಶ್ ಬಾಬು ಆಪ್ತರ ಮನೆ, ಕಚೇರಿ ಮೇಲೆ ಐಟಿ ದಾಳಿ.

ಬಳ್ಳಾರಿ,ಜನವರಿ,14,2023(www.justkannada.in):  ಸಾರಿಗೆ ಸಚಿವ ಶ್ರೀರಾಮುಲು ಹಾಗೂ ಮಾಜಿ ಶಾಸಕ ಸುರೇಶ್ ಬಾಬು  ಆಪ್ತರ ಮನೆ, ಕಚೇರಿ ಮೇಲೆ ಐಟಿ ದಾಳಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಶ್ರೀರಾಮುಲು, ಸುರೇಶ್ ಬಾಬು ಒಡೆತನದ ಫ್ಯಾಕ್ಟರಿ ನಡೆಸುತ್ತಿದ್ದ ಆಪ್ತರ ಮನೆ ಹಾಗೂ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸಚಿವ ಶ್ರೀರಾಮುಲು ಹಾಗೂ ಕೈಲಾಸ್ ವ್ಯಾಸ್ ಸೇರಿ ಖರೀದಿಸಿರುವ ಹರಿ ಇಸ್ಪಾತ್ ಫ್ಯಾಕ್ಟರಿ ಮೇಲೂ ಸಹ ಐಟಿ ದಾಳಿಯಾಗಿದೆ.ಸಚಿವ ಶ್ರೀರಾಮುಲು ಮಾಜಿ ಶಾಸಕ ಸುರೇಶ್ ಬಾಬು ಆಪ್ತರ ಮನೆ it

ಬೆಂಗಳೂರು, ಬಳ್ಳಾರಿ, ಕೊಪ್ಪಳದಲ್ಲಿ ಏಕಕಾಲಕ್ಕೆ ದಾಳಿಯಾಗಿದೆ.    ಕೈಗಾರಿಕೋದ್ಯಮಿ ಕೈಲಾಸ್ ವ್ಯಾಸ್ ಪಾಲುದಾರಿಕೆಯ ಕಂಪನಿಗಳ ಮೇಲೆ ದಾಳಿಯಾಗಿದ್ದು, ಬಳ್ಳಾರಿಯ ವಿದ್ಯಾನಗರದ ರಾಗಾಸ್ ಪೋರ್ಟ್ ಅಪಾರ್ಟ್ಮೆಂಟ್ ಫ್ಲಾಟ್ ನಂಬರ್ 310 ಮತ್ತು 510ಪ್ಲಾಟ್ ನಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ತೆರಿಗೆ ವಂಚನೆ ಮಾಡಿದ ಆರೋಪದ ಐಟಿ ದಾಳಿಯಾಗಿದೆ.

Key words: IT –raid- minister Sriramulu-friend– house -office