Sunday, September 20, 2026

BDA Apartments

1 ಕೋಟಿ ಹಣ ಜಪ್ತಿ ಕೇಸ್ ಗೆ ಟ್ವಿಸ್ಟ್..? ಉದ್ಯಮಿ ಮನೆ ಮೇಲೆ ಐಟಿ ದಾಳಿ… BDA JK_Adv BDA Adv
Home Front Page 1 ಕೋಟಿ ಹಣ ಜಪ್ತಿ ಕೇಸ್ ಗೆ ಟ್ವಿಸ್ಟ್..? ಉದ್ಯಮಿ ಮನೆ ಮೇಲೆ ಐಟಿ...

1 ಕೋಟಿ ಹಣ ಜಪ್ತಿ ಕೇಸ್ ಗೆ ಟ್ವಿಸ್ಟ್..? ಉದ್ಯಮಿ ಮನೆ ಮೇಲೆ ಐಟಿ ದಾಳಿ…

ಮಂಗಳೂರು,ಮೇ,18,2019(www.justkannada.in):  ನಿನ್ನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಬಂದರಿನಲ್ಲಿ ವ್ಯಕ್ತಿಯೊಬ್ಬರ ಬಳಿ 1ಕೋಟಿ ರೂ ಹಣ ಜಪ್ತಿ ಮಾಡಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಇದೇ ಆಧಾರದ ಮೇಲೆ ಐಟಿ ಇಲಾಖೆ ಅಧಿಕಾರಿಗಳು ಇಂದು ಮಂಗಳೂರಿನಲ್ಲಿ ಉದ್ಯಮಿಯೊಬ್ಬರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಉದ್ಯಮಿ ರಾಜ್ ಪವಾರ್ ಎಂಬುವವರ ಮನೆ ಕಾರ್ ಸ್ಟ್ರೀಟ್  ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ನಿನ್ನೆ ಮಂಗಳೂರು ಬಂದರಿನ ಬಳಿ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 1 ಕೋಟಿ ರೂ ಹಣವನ್ನ ಪೊಲೀಸರು ಜಪ್ತಿ ಮಾಡಿದ್ದರು. ಹಣ ಸಾಗಿಸುತ್ತಿದ್ದ ಬೆಂಗಳೂರು ಮಲ್ಲೇಶ್ವರಂ ಮೂಲದ ಮಂಜುನಾಥ್ ಎಂಬುವವರನ್ನ ಮಂಗಳೂರು ಉತ್ತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ನಂತರ ಐಟಿಗೆ ಪೊಲೀಸರು ಹಸ್ತಾಂತರಿಸಿದ್ದರು. ಇದೀಗ ಇದೇ ಆಧಾರದ ಮೇಲೆ ಐಟಿ ಅಧಿಕಾರಿಗಳು ರಾಜುಪವಾರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ನಡುವೆ ರಾಜು ಪವಾರ್ ಮನೆ ಹತ್ತಿರ ದಾವಣಗೆರೆ ಮೂಲದ ಮಂಜುನಾಥ್ ಎಂಬುವವರ ಬಳಿ 24 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ. ಮಂಜುನಾಥ್ ಗೂ ರಾಜು ಪವಾರ್ ಗೂ ಲಿಂಕ್ ಇದೆಯಾ ಎಂಬುದರ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

Key words: IT attacked  Businessman’s house  in mangalore.

#IT #Businessman #mangalore.