ಚಂದ್ರಯಾನ-3 ಯಶಸ್ವಿ ಬೆನ್ನಲ್ಲೆ ಸೂರ್ಯಯಾನಕ್ಕೆ ಇಸ್ರೋ ಸಜ್ಜು: ಸೆ.2ರಂದು ಆದಿತ್ಯ L-1 ಉಡಾವಣೆ

ಬೆಂಗಳೂರು,ಆಗಸ್ಟ್,28,2023(www.justkannada.in): ಭಾರತೀಯ ಬಾಹ್ಯಕಾಶ ಸಂಸ್ಥೆ(ISRO) ಮತ್ತೊಂದು ಮೈಲಿಗಲ್ಲು ಸ್ಥಾಪನೆಗೆ ಮುಂದಾಗಿದ್ದು ಚಂದ್ರಯಾನ-3 ಯಶಸ್ವಿ ಬೆನ್ನಲ್ಲೆ ಸೂರ್ಯಯಾನಕ್ಕೆ ಸಜ್ಜಾಗಿದೆ.

ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಸೌರ ಮಿಷನ್ ಆದಿತ್ಯ -ಎಲ್ 1 ಅನ್ನು ಸೆಪ್ಟೆಂಬರ್ 2, 2023 ರಂದು ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಉಡಾವಣೆ ಮಾಡುವುದಾಗಿ  ಇಸ್ರೋ ಘೋಷಿಸಿದೆ. ಸೆಪ್ಟಂಬರ್2 ರ ಬೆಳಿಗ್ಗೆ 11.50ಕ್ಕೆ ಆದಿತ್ಯ L-1 ಉಡಾವಣೆಯಾಗಲಿದೆ.

ಸೂರ್ಯನ ವರ್ತನೆ ತಿಳಿದುಕೊಳ್ಳುವ ಉದ್ದೇಶವನ್ನು ಇಸ್ರೋ ಹೊಂದಿದ್ದು,  ಸೌರ ಬಿರುಗಾಳಿಗಳು ಹೇಗೆ ಉಂಟಾಗುತ್ತವೆ. ಸೌರಮಾರುತಗಳು ಅಪ್ಪಳಿಸುವಾಗ ಮುಂಜಾಗ್ರತ ಕ್ರಮ ಕೈಗೊಳ್ಳಲು ಇದು ಸಹಾಯವಾಗಲಿದೆ.

Key words: ISRO – Sun -mission -Aditya L-1- launch-September 2