Monday, August 31, 2026

BDA Apartments

Home Front Page ನನಗೆ ಹೆಚ್ಚುವರಿ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ- ಈಶ್ವರ್ ಖಂಡ್ರೆ

ನನಗೆ ಹೆಚ್ಚುವರಿ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ- ಈಶ್ವರ್ ಖಂಡ್ರೆ

ಬೆಂಗಳೂರು,ಮೇ,29,2026 (www.justkannada.in):  ಶಾಸಕಾಂಗ ಪಕ್ಷದ ನಾಯಕ ಆಯ್ಕೆ, ನೂತನ ಸಿಎಂ  , ಸಂಪುಟ ಪುನಾರಚನೆ ಚರ್ಚಿಸಲು ನಾಳೆ ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಿಗದಿಯಾಗಿದ್ದು ಈ ಮಧ್ಯೆ ನೂತನ ಸಂಪುಟದಲ್ಲಿ ಸೇರ್ಪಡೆಯಾಗಲು ಶಾಸಕರ ಲಾಬಿ ಜೋರಾಗಿದೆ. ಈ ಮಧ್ಯೆ ಅರಣ್ಯ ಸಚಿವರಾಗಿದ್ದ ಈಶ್ವರ್ ಖಂಡ್ರೆ ಇದೀಗ ಹೆಚ್ಚುವರಿ ಜವಾಬ್ದಾರಿಗೆ ಬೇಡಿಕೆ ಇಟ್ಟಿದ್ದಾರೆ.

ಹೌದು  ಈ ಬಗ್ಗೆ ಮಾತನಾಡಿರುವ ಶಾಸಕ ಮಾಜಿ ಸಚಿವ ಈಶ್ವರ್ ಖಂಡ್ರೆ, ನಾನು ಅರಣ್ಯ ಇಲಾಖೆಯಲ್ಲಿ ಹತ್ತಾರು  ಯೋಜನೆ ನೀಡಿದ್ದೇನೆ.  ನನ್ನ ಕೆಲಸ ತೃಪ್ತಿ ತಂದಿದೆ. ನನ್ನ ಕೆಲಸದ ಬಗ್ಗೆ ಹೈಕಮಾಂಡ್ ಗೆ ಗೊತ್ತಿದೆ. ನನಗೆ ಹೆಚ್ಚುವರಿ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ ಎಂಧು ತಿಳಿಸಿದ್ದಾರೆ.

ನಾನು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿದ್ದೇನೆ.  ಸಚಿವ ಸಂಪುಟದಲ್ಲಿ ಲಿಂಗಾಯತರಿಗೆ ಸೂಕ್ತ ಪ್ರಾತಿನಿಧ್ಯ ಕೊಡಬೇಕು ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

Key words:  Cabinet, additional, responsibility, handle, Ishwar Khandre