Friday, September 25, 2026

BDA Apartments

Home Front Page ನಿಮ್ಮ ಮನೆಗೆ ಮುಸ್ಲೀಂ ಸ್ನೇಹಿತರನ್ನ ಕರೆಸಿ ಹಂದಿ ಮಾಂಸದ ಊಟ ಹಾಕಿ, ತಿನ್ನುತ್ತಾರಾ ನೋಡಿ- ಹಂಸಲೇಖ...

ನಿಮ್ಮ ಮನೆಗೆ ಮುಸ್ಲೀಂ ಸ್ನೇಹಿತರನ್ನ ಕರೆಸಿ ಹಂದಿ ಮಾಂಸದ ಊಟ ಹಾಕಿ, ತಿನ್ನುತ್ತಾರಾ ನೋಡಿ- ಹಂಸಲೇಖ ವಿರುದ್ಧ ಪ್ರತಾಪ್ ಸಿಂಹ ಕಿಡಿ.

ಮೈಸೂರು,ನವೆಂಬರ್,15,2021(www.justkannada.in):  ಪೇಜಾವರ ಶ್ರೀಗಳ ದಲಿತರ ಮನೆ ವಾಸ್ತವ್ಯ ಕುರಿತು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಇದೀಗ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಿಮ್ಮ ಮನೆಗೆ ಮುಸ್ಲಿಂ ಸ್ನೇಹಿತರ ಕರೆಯಿರಿ. ಅವರಿಗೆ ಹಂದಿ ಮಾಂಸದ ಊಟ ಹಾಕಿ. ಅವರು ತಿನ್ನುತ್ತಾರಾ ನೋಡಿ. ಮುಸ್ಲಿಂ ಧರ್ಮದಲ್ಲಿ ಹಂದಿ ಮಾಂಸ ತಿನ್ನುವುದು ನಿಷೇಧ. ಅದಕ್ಕೆ ಅವರು ತಿನ್ನುವುದಿಲ್ಲ. ಆಗ ಅದನ್ನು ತಪ್ಪು ಎನ್ನುತ್ತೀರಾ? ಎಂದು ಹಂಸಲೇಖ ಅವರಿಗೆ ಪ್ರಶ್ನಿಸಿದ್ದಾರೆ.

ಪ್ರಗತಿಪರ ಅನ್ನಿಸಿ ಕೊಳ್ಳುವ ಗೀಳಿಗೆ ಬಿದ್ದು, ಪ್ರಚಾರಕ್ಕಾಗಿ ಹೀಗೆ ಮಾತಾಡುತ್ತಿದ್ದಾರೆ. ಹಂಸಲೇಖ ಅವರು ಬಾಯಿ ತಪ್ಪಿನಿಂದ ಈ ರೀತಿ ಹೇಳಿದ್ದಾರೆ ಎಂದು ಅನ್ನಿಸುವುದಿಲ್ಲ. ಪ್ರಚಾರದ ಗೀಳಿಗೆ ಬಿದ್ದಾಗ ಅಸಂಬದ್ಧ ಮಾತು ಬರುತ್ತದೆ. ಸಾಧು ಸಂತರ ಬಗ್ಗೆ ಮಾತನಾಡುವಾಗಿ ಪರಿಜ್ಞಾನ ಇಟ್ಟುಕೊಂಡು ಎಚ್ಚರಿಕೆಯಿಂದ ಮತನಾಡಬೇಕು ಎಂದು ಸಲಹೆ ನೀಡಿದರು.

ಜನಾಭಿಪ್ರಾಯದ ವಿರುದ್ದ ಮಾತಾನಾಡಿ ನಂತರ ಕ್ಷಮೆಯಾಚಿಸುವ ಛಾಳಿ ಹೆಚ್ಚಾಗಿದೆ. ಹಂಸಲೇಖ ಅವರು ಪರಿಜ್ಞಾನದಿಂದ ಪೇಜಾವರರ ಶ್ರೀಗಳ ಬಗ್ಗೆ ಮಾತಾಡಬೇಕಿತ್ತು. ಪೇಜಾವರ ಶ್ರೀಗಳು ಬೇರೆ ರೀತಿಯ ಜಾತಿ ಸ್ವಾಮೀಜಿ ರೀತಿ ಅಲ್ಲ. ಕರ್ಮಠ ವ್ಯವಸ್ಥೆ ಯನ್ನು ಮೀರಿ ಸಮಾನತೆ ಸಾರಿದವರು ಪೇಜಾವರ ಶ್ರೀ. ಸಾಧು ಸಂತರ ಆಹಾರ ಪದ್ಧತಿ ಸಸ್ಯಹಾರ, ಮನಸ್ಸಿನ ತಾರತಮ್ಯ ತೆಗೆದು ಹಾಕಲು ಶ್ರೀಗಳು ಹೋಗಿದ್ದರು ಹೊರತು ಆಹಾರ ಪದ್ಧತಿಯ ಸಮಾನತೆಗೆ ಅಲ್ಲ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಇಡಿಯವರು ಮಾಜಿ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ನೀಡಲಿ.

ರಾಜ್ಯದಲ್ಲಿ ಬಿಟ್ ಕಾಯಿನ್ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಇಡಿಯವರು ಮಾಜಿ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ನೀಡಲಿ. ಬಿಟ್ ಕಾಯಿನ್ ಬಗ್ಗೆ ಮೊದಲು ಟ್ವೀಟ್ ಮಾಡಿದವರು ಸಿದ್ದರಾಮಯ್ಯ. ನಂತರ ಪ್ರಿಯಾಂಕಾ ಖರ್ಗೆ, ಸುರ್ಜೆವಾಲ ಸೇರಿ ಹಲವರು ಮಾತಾನಾಡಿದ್ದಾರೆ. ಇವರ ಬಳಿ ಬಿಟ್ ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಸಾಮಾನ್ಯ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುವಂತೆ ನಡೆಸಲಿ. ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಿ. ಕುಮಾರಸ್ವಾಮಿ ಸಹ ಜನಧನ್ ಹಣ ಕದ್ದ ಬಗ್ಗೆ ಮಾತನಾಡಿದ್ದಾರೆ. ಅವರಿಗೂ ಇಡಿ ನೋಟಿಸ್ ನೀಡಲಿ. ಈ ಎಲ್ಲಾ ನಾಯಕರು ತನಿಖೆಗೆ ಸಹಕರಿಸಲಿ. ಈ ನಾಯಕರ ಬಳಿ ಇರುವ ಸಾಕ್ಷಿ, ಮಾಹಿತಿಗಳಿಂದ ತನಿಖೆ ಮುಂದುವರಿಯಲಿ ಎಂದು ಹೇಳಿದರು.

Key words: Invite- Muslim -friends – home -pork meat-MP-Prathap simha-against -Hansalekha.