Wednesday, September 2, 2026

BDA Apartments

Home Front Page ಕಾಂಗ್ರೆಸ್ ಸೇರ್ಪಡೆಗೆ ಆಹ್ವಾನ ವಿಚಾರ: ಡಿ.ಕೆ ಶಿವಕುಮಾರ್ ಗೆ ಸಚಿವ ಭೈರತಿ ಬಸವರಾಜು ಟಾಂಗ್.

ಕಾಂಗ್ರೆಸ್ ಸೇರ್ಪಡೆಗೆ ಆಹ್ವಾನ ವಿಚಾರ: ಡಿ.ಕೆ ಶಿವಕುಮಾರ್ ಗೆ ಸಚಿವ ಭೈರತಿ ಬಸವರಾಜು ಟಾಂಗ್.

ದಾವಣಗೆರೆ,ಜುಲೈ,13,2021(www.justkannada.in): ಕಾಂಗ್ರೆಸ್ ಸೇರ್ಪಡೆಗೆ ಯಾರು ಬೇಕಾದರೂ ಅರ್ಜಿ ಹಾಕಬಹುದು ಎಂದು ಪಕ್ಷ ಸೇರ್ಪಡೆಗೆ ಆಹ್ವಾನ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಸಚಿವ ಭೈರತಿ ಬಸವರಾಜು ಟಾಂಗ್ ನೀಡಿದ್ದಾರೆ.jk

ದಾವಣಗೆರೆಯಲ್ಲಿ ಇಂದು ಮಾತನಾಡಿದ ಸಚಿವ ಭೈರತಿ ಬಸವರಾಜು, ಬಿಜೆಪಿಗೆ ಬಂದ ಮೇಲೆ ನೆಮ್ಮದಿಯಾಗಿ ಚೆನ್ನಾಗಿದ್ದೇವೆ.  ಜಿಪಂ ತಾಪಂ ಮಾಜಿ ಸದಸ್ಯರನ್ನ ಬಿಜೆಪಿಗೆ ಆಹ್ವಾನಿಸುವೆ.  ನಾವಂತೂ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಪ್ರಶ್ನೆಯೇ ಇಲ್ಲ ಎಂದು ಡಿ.ಕೆ ಶಿವಕುಮಾರ್ ಗೆ ತಿರುಗೇಟು ನೀಡಿದರು.

ಸಿಎಂ ಬಿಎಸ್‍ವೈ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳು ಉತ್ತಮವಾಗಿ ನಡೆದಿವೆ. ರಾಜ್ಯದಲ್ಲಿ ಉತ್ತಮ ಮಳೆಯೂ ಆಗುತಿದ್ದು,  ಕೊರೊನಾ ಹಾವಳಿ ಕಡಿಮೆ ಆದರೆ ಅಭಿವೃದ್ಧಿಗೆ ಇನ್ನಷ್ಟು ಅನುಕೂಲವಾಗುತ್ತೆ ಎಂದರು. ಹಾಗೆಯೇ ಕೋವಿಡ್ ನಿಂತ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತದೆ ಎಂದು ಸಚಿವ ಭೈರತಿ ಬಸವರಾಜು ತಿಳಿಸಿದರು.

Key words: Invitation – join- Congress-Bhairati Basavaraju -Minister – DK Shivakumar.