ಕೆಎಸ್ ಒಯು ಕುಲಪತಿ ವಿದ್ಯಾಶಂಕರ್ ಅವಧಿಯ ಭ್ರಷ್ಟಾಚಾರ, ಹಗರಣಗಳ ಬಗ್ಗೆ ತನಿಖೆ ನಡೆಸಿ- ವರುಣಾ ಮಹೇಶ್ ಆಗ್ರಹ.

ಮೈಸೂರು,ಡಿಸೆಂಬರ್,22,2021(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ನೇಮಕಾತಿಗಳು ಸೇರಿದಂತೆ ಹಲವಾರು ಅಕ್ರಮಗಳಲ್ಲಿ ಕುಲಪತಿ ಪ್ರೊ.ವಿದ್ಯಾಶಂಕರ್ ಭಾಗಿಯಾಗಿದ್ದಾರೆ. ಹಾಗಾಗಿ ವಿದ್ಯಾಶಂಕರ್ ಅವರ ಅಧಿಕಾರ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಹಗರಣಗಳ ಬಗ್ಗೆ ತನಿಖೆ ನಡೆಸಬೇಕು ಎಂದು ವರಣಾ ಮಹೇಶ್ ಆಗ್ರಹಿಸಿದ್ದು ಈ ಕುರಿತು ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವರುಣಾ ಮಹೇಶ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿದ್ಯಾಶಂಕರ್ ನನ್ನ ವಿರುದ್ಧ ಮಾಡಿರುವ ಕೊಲೆ ಆರೋಪ ಸುಳ್ಳು. ವಿದ್ಯಾಶಂಕರ್ ಅವರು ಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮುಕ್ತ ವಿ ವಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಪ್ರಶ್ನೆ ಮಾಡಿದ ನನ್ನ ವಿರುದ್ದ ಕೊಲೆ ಆರೋಪ ಮಾಡಿದ್ದಾರೆ. ಅವರು ಮಾಡಿರುವ ತಪ್ಪನ್ನು ಮರೆಮಾಚಲು ನನ್ನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ ಎಂದು ಹೇಳಿದರು.

ಈ  ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ವರುಣಾ ಮಹೇಶ್ ಬರೆದಿರುವ ಪತ್ರದ ಸಾರಾಂಶ ಹೀಗಿದೆ..

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಶುಲ್ಕದ ಹಣದಲ್ಲಿ COVID-19 ಲಾಕ್‌ ಡೌನ್ ನಡುವೆಯೂ ಹಣಕಾಸು ಸಮಿತಿ ಹಾಗೂ ವ್ಯವಸ್ಥಾಪನಾ ಮಂಡಳಿಯ ತೀರ್ಮಾನವನ್ನು ತಿರುಚಿ, ಕುಲಪತಿಗಳ ಕಛೇರಿ ಉಪಯೋಗಕ್ಕೆ ಹಾಲಿ ಒಂದು 2010ರ ಐಶಾರಾಮಿ ಹೋಂಡಾ ಆಕಾರ್ಡ್, 2010 ಮತ್ತು 2015ರ ಎರಡು ಟೊಯೊಟಾ ಇನ್ನೋವಾ ಕಾರುಗಳು ಲಭ್ಯವಿದ್ದರೂ ಸಹ ಮಾರ್ಚ್ 2021 ರಲ್ಲಿ ಸುಮಾರು ರೂ. 85-00 ಲಕ್ಷಗಳ ವೆಶ್ಯದಲ್ಲಿ ಹೆಚ್ಚುರಿಯಾಗಿ ಐಶಾರಾಮಿ 3 ಹೊಸ ಟೊಯೊಟಾ ಇನ್ನೋವಾ ಕಾರುಗಳನ್ನು ಖರೀದಿಸಲಾಗಿದೆ.

ಇದರ ಮಧ್ಯೆ ಈ ವರ್ಷ ಪ್ರವೇಶಾತಿ ಶುಲ್ಲವನ್ನು ಏಕಾಏಕಿ ಶೇಕಡ 35 ರಿಂದ 50ರವರೆಗೆ  ಹೆಚ್ಚಿಸುವುದರ ಜೊತೆಗೆ ಇದೇ ಮೊದಲ ಬಾರಿಗೆ Silver Jublee Fee, Admission Process Fee, Development (Skill) Fee, Alumni Fee ಕಡ್ಡಾಯಗೊಳಿಸಿ ಕೋವಿಡ್ ಸಾಂಕ್ರಮಿಕದ ಆರ್ಥಿಕ ಹೊಡೆತದಿಂದ ಕುಗ್ಗಿಹೋಗಿರುವ  ವಿದ್ಯಾರ್ಥಿಗಳ ಮೇಲೆ ಶುಲ್ಕ ಹೆಚ್ಚಳದ ಹೊರೆಯನ್ನು ಹೇರಿ ಅವರ ಉನ್ನತ ಶಿಕ್ಷಣದ ಕನಸಿಗೆ ತೊಡಕುಂಟುಮಾಡಲಾಗಿದೆ ಎಂದು ಆರೋಪಿಸಿದರು.

COVID-19 ಶಾಕ್‌‌ನ ನಡುವೆಯೇ ಇರುವ ಈ 3 ವಾಹನ ಖಲೀದಿಗಳು, ಮೇಲೆ ಹೇಳಿದ ಕರಾಮುವಿ ಹಣಕಾಸು ಸಮಿತಿಯ ಮತ್ತು ವ್ಯವಸ್ಥಾಪನಾ ಮಂಡಳಿಯ ತೀರ್ಮಾನಗಳಿಗೆ ವ್ಯತಿರಿಕ್ತವಾಗಿ ಮತ್ತು ಸಂಪೂರ್ಣ ಉಲ್ಲಂಘನೆಯಾಗಿದೆ, ಕಾರಣ ಸದರಿ ತೀರ್ಮಾನಗಳಲ್ಲಿ ಹೋಂಡಾ ಅಕಾರ್ಡ್ ಕಾರನ್ನೂ ಒಳಗೊಂಡಂತೆ ಅಕ್ಟೋಬರ್ 2011ರಲ್ಲಿ ಖರೀದಿಸಲಾಗಿರುವ 4 ಇಂಡಿಗೋ ಕಾರುಗಳನ್ನು ಹರಾಜು ಹಾಕಿ ಹೊಸ ವಾಹನಗಳನ್ನು ಖರೀದಿಸಬೇಕಿರುತ್ತದೆ. ಅಲ್ಲದೇ ಸದರಿ ತೀರ್ಮಾನಗಳಲ್ಲಿ ಕಹೊಸ  ವಾಹನ ಖರೀದಿಗೆ ಆರ್ಥಿಕ ಮೊತ್ತದ ಅನುಮೋದನೆಯನ್ನಾಗಲಿ ಅಥವಾ ಇಂತದ್ದೇ ಮಾದರಿಯ ವಾಹನ ಖರೀದಿಸಲು ಅನುಮೋದನೆಯನ್ನಾಗಲಿ ನೀಡಲಾಗಿರುವುದಿಲ್ಲ. ರಾಜ್ಯ ಸಾರಿಗೆ ಇಲಾಖೆಯ ದಾಖಲೆ/ಮಾಹಿತಿ ಪ್ರಕಾರ 23 ಮಾರ್ಚ್ 2002ರ ಈ ಐಶಾರಾಮಿ 3 ಹೊಸ ಟೊಯೊಟಾ ಇನ್ನೋವಾ ಕಾರುಗಳನ್ನು ಕರಾಮುವಿಯಿಂದ ಖರೀದಿಸಲಾಗಿದೆ.

ಬಹುಷ: ವಿಶ್ವವಿದ್ಯಾನಿಲಯವೊಂದರ ಕುಲಪತಿಗಳ ಕಚೇರಿ ಉಪಯೋಗಕ್ಕಾಗಿ ಐಶಾರಾಮಿ Honda accord, Toyota Innova ಕಾರುಗಳು ನಿಯೋಜಿತಗೊಂಡಿರುವ ಪ್ರತಮ ವಿಶ್ವವಿದ್ಯಾನಿಲಯ ಕರಾಮುವಿ ಎಂದರೆ ತಪ್ಪಾಗಲಾರದು. ಈ ಹೊಸ 2 ಇನ್ನೋವಾ ಕಾರುಗಳ ಪೈಕಿ ಒಂದು ಕಾರು ಕರಾಮುವಿ ಕುಲಪತಿಗಳ ಕುಟುಂಬದ ಬಳಕೆಗಾಗಿ ಬಳಕೆಯಾಗುತ್ತಿದೆ ಎಂದು ವರುಣಾ ಮಹೇಶ್ ಆರೋಪಿಸಿದ್ದಾರೆ.

ಹಾಗಾಗಿ ವಿದ್ಯಾಶಂಕರ್ ಅವರ ಅಧಿಕಾರ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಹಗರಣಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ವರಣಾ ಮಹೇಶ್.

Key words: Investigate- corruption -scandals – KSOU –VC-Vidyashankar -Varuna Mahesh