ಅಂತಾರಾಷ್ಟ್ರೀಯ ಸಹಭಾಗಿತ್ವ ವಿವಿ ಘನತೆ ಹೆಚ್ಚಿಸುತ್ತದೆ-  ಪ್ರೊ.ಕೆ.ಎಸ್‌. ರಂಗಪ್ಪ

ಮೈಸೂರು,ಸೆಪ್ಟಂಬರ್,14,2022(www.justkannada.in):  ಒಂದು ವಿವಿ ಮತ್ತೊಂದು ವಿವಿಯೊಂದಿಗೆ ನಡೆಸುವ ಅಂತಾರಾಷ್ಟ್ರೀಯ ಸಹಭಾಗಿತ್ವದ ಶೈಕ್ಷಣಿಕ ಚಟುವಟಿಕೆ ಕಲಿಕೆಗೆ ವಿಶೇಷವಾದ ವೇದಿಕೆಯಾಗಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದ್ದಾರೆ.

ಫ್ರಾನ್ಸ್ ದೇಶದಲ್ಲಿನ ಉನ್ನತ ಶಿಕ್ಷಣದ ಅವಕಾಶಗಳು ಹಾಗೂ ವೈಜ್ಞಾನಿಕ ಸಹಕಾರ ಕುರಿತು ವಿಜ್ಞಾನ ಭವನದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ್ದು ಇಷ್ಟು…..

ಒಂದು ದೇಶದ ವಿವಿಯಲ್ಲಿ ಸಾಕಷ್ಟು ಪ್ರಾಧ್ಯಾಪಕರು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಅಂತಾರಾಷ್ಟ್ರೀಯ ಸಹಭಾಗಿತ್ವದಿಂದ ಇವರೆಲ್ಲರ ಬುದ್ದಿವಂತಿಕೆ ಪರಿಚಯವಾಗುತ್ತದೆ. ಹೊಸ ವಿಚಾರಗಳ ವಿನಿಮಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಶೋಧನೆಗೆ ಇದು ಹೊಸದೊಂದು ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ಇದರಿಂದ ವಿವಿಗಳಿಗೂ ಗೌರವ ಸಿಗುತ್ತದೆ. ಇದರಿಂದ ಕೌಶಲ್ಯ ವೃದ್ದಿಯೂ ಆಗುತ್ತದೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಸಹಭಾಗಿತ್ವದಿಂದ ಪ್ರಾಧ್ಯಾಪಕರಿಗೆ ಹಾಗೂ ಸಂಶೋಧಕರಿಗೆ ಹೊಸ ಬಗೆಯ ವೃತ್ತಿ ಅನುಭವ ಸಿಗುತ್ತದೆ. ಹೊಸ ಪ್ರಯೋಗಗಳ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆ ನೀಡಬಹುದು. ಅದಕ್ಕಿಂತ ಹೆಚ್ಚಾಗಿ ಜ್ಞಾನಾರ್ಜನೆಗೆ ಯಾವುದೇ ಗಡಿಗಳ ಮಿತಿ ಇಲ್ಲ ಎಂಬುದನ್ನು ಇದು ನಿರೂಪಿಸುತ್ತದೆ. ಹಾಗಾಗಿ ವಿವಿಗಳಲ್ಲಿ ಹೆಚ್ಚು ಅಂತಾರಾಷ್ಟ್ರೀಯ ಒಪ್ಪಂದ, ಒಡಂಬಡಿಕೆ, ಸಹಭಾಗಿತ್ವ ರಚನೆಯಾದಷ್ಟು ಹೆಚ್ಚೆಚ್ಚು ಸಂಶೋಧನೆಗಳು ನಡೆಯುತ್ತವೆ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಮಾತನಾಡಿ, ಇದೊಂದು ವಿಚಾರ ವಿನಿಮಯ ಕಾರ್ಯಕ್ರಮ. ಫ್ರಾನ್ಸ್ ದೇಶದಲ್ಲಿನ ಶಿಕ್ಷಣ ಪದ್ಧತಿ ಹಾಗೂ ಸಂಶೋಧನೆ ಬಗ್ಗೆ ಸಾಕಷ್ಟು ಅಂಶಗಳು ಗೋಚರವಾಯಿತು. ಇಂತಹ ಉಪನ್ಯಾಸ ಹೆಚ್ಚಾಗಿ ನಡೆಸಬೇಕೆಂದು ಆಶಿಸಿದರು.

ಫ್ರಾನ್ಸ್ ವಿದೇಶಾಂಗ ಸಚಿವಾಲಯದ ಕೌನ್ಸಿಲರ್ ಥೈರಿ ಬರ್ತೋಲೆಟ್, ಸಿಎನ್ ಆರ್ ಎಸ್ ನಿರ್ದೇಶಕ ಡಾ.ಶ್ರೀನಿ ಕಾವೇರಿ, ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ ‌ಸೇರಿದಂತೆ ಇತರರು ಇದ್ದರು.

Key words: International-cooperation- prestige – university-Prof. K.S. Rangappa

ENGLISH SUMMARY…

International partnership will increase our Varsity’s reputation: Prof. K.S. Rangappa
Mysuru, September 14, 2022 (www.justkannada.in): “International Partnership between two varsities is a special forum for educational activities and learning,” observed former Vice-Chancellor Prof. K.S. Rangappa.
He participated in a lecture program on the topic, “Higher Education Opportunities in France and Scientific Cooperation,” held at the Vignana Bhavana, in Manasa Gangotri campus today. “There will be several professors serving any university. International partnership will help to know their intelligence and help in exchange of new ideas. Above all it provides a new platform for research. It also brings respect to the varsities and helps in honing the skills too,” he added.
“International Partnership will provide a new professional experience to the professors and researchers. Through new experiments they can contribute for the development of the society. More than this, it proves that there is no limits of borders for learning and gaining knowledge. Hence, more and more international partnerships and agreements will increase the number of research programs,” he explained.
In his address, Prof. G. Hemanth Kumar, Vice-Chancellor, University of Mysore informed that it is an program to exchange ideas. “Many aspects have appeared in the educational system and research activities of France. Hence, this kind of lecture programs should also increase,” he said.
France External Ministry Counsellor Thyeri Bartholet. CNRS Director Dr. Srini Kaveri, University of Mysore Registrar Prof. R. Shivappa and others were present.
Keywords: University of Mysore/ International Partnership/ varsities