ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಮಧ್ಯಂತರ ತಡೆ ಒಂದು ವಾರ ಮುಂದುವರಿಕೆ.

ಬೆಂಗಳೂರು,ಫೆಬ್ರವರಿ,24,2023(www.justkannada.in): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧದ ಆದಾಯಮೀರಿ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಮಧ್ಯಂತರ ತಡೆಯಾಜ್ಞೆಯನ್ನ ಹೈಕೋರ್ಟ್ ಒಂದು ವಾರ ಮುಂದುವರಿಕೆ ಮಾಡಿದೆ.

ತಮ್ಮ ವಿರುದ್ದದ  ಸಿಬಿಐ ಎಫ್ ಐಆರ್ ರದ್ದು ಕೋರಿ ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಪ್ರಕರಣ ಸಂಬಂಧ ಹೈಕೋರ್ಟ್ ಗೆ ಸಿಬಿಐ ತನಿಖಾ ಪ್ರಗತಿ ವರದಿ ಸಲ್ಲಿಸಿತು. ಹಾಗೆಯೇ ತನಿಖೆಗೆ ನೀಡಿರುವ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಲು  ಕೋರ್ಟ್ ಗೆ ಸಿಬಿಐ ಮನವಿ ಮಾಡಿತು.

ಈ ಸಂಬಂಧ ಹೈಕೋರ್ಟ್ ವಿಚಾರಣೆಯನ್ನ ಮಾರ್ಚ್ 3ಕ್ಕೆ ಮುಂದೂಡಿದೆ.   ಈ ಮೂಲಕ ಡಿ.ಕೆ ಶಿವಕುಮಾರ್ ಗೆ ಒಂದು ವಾರ ರಿಲೀಫ್ ಸಿಕ್ಕಂತಾಗಿದೆ.

Key words: Interim stay – CBI -probe –against- DK Shivakumar -extended – one week-high court