ಅಭ್ಯಾಸದ ವೇಳೆ ಗಾಯ: ಟೆಸ್ಟ್ ಸರಣಿಯಿಂದ ರಾಹುಲ್ ಔಟ್

ಮೆಲ್ಬರ್ನ್, ಜನವರಿ 05, 2020 (www.justkannada.in): 

ಮೆಲ್ಬರ್ನ್​ ಕ್ರಿಕೆಟ್​​ ಮೈದಾನದಲ್ಲಿ ನಿನ್ನೆ ನಡೆದ ಅಭ್ಯಾಸದ ವೇಳೆ ರಾಹುಲ್ ‍ಗಾಯಗೊಂಡ ಹಿನ್ನೆಲೆಯಲ್ಲಿ ಸರಣಿಯಿಂದ ಹೊರ ಬಂದಿದ್ದಾರೆ.

ವೈದ್ಯಕೀಯ ತಂಡದ ಸಲಹೆಯ ಮೇರೆಗೆ ರಾಹುಲ್​ ಸರಣಿಯ ಉಳಿದ 2 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಭಾರತಕ್ಕೆ ವಾಪಸ್ಸಾದ ಬಳಿಕ ನ್ಯಾಷನಲ್​ ಕ್ರಿಕೆಟ್​​ ಅಕಾಡೆಮಿಯಲ್ಲಿ 3 ವಾರಗಳ ಕಾಲ ಪುನಶ್ಚೇತನ ಶಿಬಿರದಲ್ಲಿ ರಾಹುಲ್ ಪಾಲ್ಗೊಳ್ಳಲಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದ ಏಕದಿನ ಹಾಗೂ ಟಿ-20 ಪಂದ್ಯಗಳನ್ನಾಡಿದ್ದ ರಾಹುಲ್​, ಟೆಸ್ಟ್​ ಸರಣಿಯಲ್ಲಿ ಅವಕಾಶ ವಂಚಿತರಾಗಿದ್ದರು.