ಪೊಲೀಸರು ಮಾಡಬೇಕಾದ ಕೆಲಸ ಇಂದ್ರಜಿತ್ ಲಂಕೇಶ್ ಮಾಡುತ್ತಿದ್ದಾರೆ: ಎಚ್.ವಿಶ್ವನಾಥ್ ಶ್ಲಾಘನೆ

ಮೈಸೂರು, ಸೆಪ್ಟೆಂಬರ್ 02, 2020 (www.justkannada.in): ಮಾಫಿಯಾದಿಂದಾಗಿ ಪಂಜಾಬ್ ಮುಖ್ಯಮಂತ್ರಿ ಅಮರೀಂಧರ್ ಸಿಂಗ್ ಅಲ್ಲಾಡಿ ಹೋಗಿದ್ದಾರೆ‌. ಈಶಾನ್ಯ ರಾಜ್ಯಗಳಲ್ಲಿ ಈ ಮಾಫಿಯಾ ವ್ಯಾಪಿಸುತ್ತಿದೆ.
ಇದರಲ್ಲಿ ಪ್ರಭಾವಿ ಕುಟುಂಬಗಳ ಪಾತ್ರವಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

ಈ ವಿಚಾರದಲ್ಲಿ ಇಡೀ ಸಮಾಜ ಜಾಗೃತ ಆಗಿರಬೇಕು. ರೇವ್ ಪಾರ್ಟಿ ಮಾಡುವವರು ಯಾರು ? ಇಂದು ಚಿತ್ರರಂಗ ಏನಾಗಿದೆ ? ಎಂಬ ವಿಮರ್ಶೆ ಮಾಡಬೇಕು. ಕ್ರೈಮ್ ವೈಭವೀಕರಣ, ಲಾಂಗು, ಡ್ಯಾನ್ಸ್, ರೇಪ್, ಮದ್ಯ, ನಶೆ, ಕತ್ತಲೆಯ ಪ್ರಪಂಚ, ಶ್ರೀಮಂತಿಕೆ ವೈಭವೀಕರಣ ಸಿನಿಮಾ ರಂಗದಲ್ಲಿ ಆಗುತ್ತಿದೆ. ಪೊಲೀಸರಿಗೆ ಎಲ್ಲಾ ಗೊತ್ತಿದ್ದರೂ ಹೇಳಲಾಗುತ್ತಿಲ್ಲ. ಇದಕ್ಕೆ ಪ್ರಮುಖವಾಗಿ ಸ್ಥಳದ ರಾಜಕಾರಣ ಕಾರಣವಾಗಿದೆ ಎಂದು ಎಚ್ವಿ ಹೇಳಿದರು.

ನಮ್ಮ ದೇಶದಲ್ಲಿ ರಾಜ್ಯದಲ್ಲಿ ಈ ಪಿಡುಗು ವ್ಯಾಪಕವಾಗಿ ಹರಡಿದೆ. ಬಹಳ ವರ್ಷಗಳಿಂದ ಬಹಳ ವ್ಯವಸ್ಥಿವಾಗಿ ನಡೆದುಕೊಂಡು ಬಂದಿದೆ. ರಾಜ್ಯದಲ್ಲಿ ಆಡಳಿತ ನಡೆಸಿರುವ ಯಾವೂದೆ ಸರ್ಕಾರವನ್ನ ಬೊಟ್ಟು ಮಾಡಿ ತೋರಿಸುವುದು ಉಚಿತವಲ್ಲ. ಈ ದಂಧೆ ಹಲವು ಹಂತಗಳಲ್ಲಿ ಬೆಳೆದು ಸೆಲಬ್ರೆಟಿಗಳ ತನಕ ಬಂದು ನಿಂತಿದೆ. ಪೋಲೀಸ್ ಇಲಾಖೆ ಮಾಡಬೇಕಾದ ಕೆಲಸವನ್ನು ಒಬ್ಬ ಸೆಲಬ್ರೆಟಿ ಮಾಡುತ್ತಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.