Friday, September 25, 2026

BDA Apartments

ರಾಜಸ್ಥಾನದಲ್ಲಿ ಇಂದು ದೇಶದ ಅತಿ ಉದ್ದದ ಎಕ್ಸ್ ಪ್ರೆಸ್ ವೇ ಉದ್ಘಾಟನೆ BDA JK_Adv BDA Adv
Home Front Page ರಾಜಸ್ಥಾನದಲ್ಲಿ ಇಂದು ದೇಶದ ಅತಿ ಉದ್ದದ ಎಕ್ಸ್ ಪ್ರೆಸ್ ವೇ ಉದ್ಘಾಟನೆ

ರಾಜಸ್ಥಾನದಲ್ಲಿ ಇಂದು ದೇಶದ ಅತಿ ಉದ್ದದ ಎಕ್ಸ್ ಪ್ರೆಸ್ ವೇ ಉದ್ಘಾಟನೆ

ಬೆಂಗಳೂರು, ಫೆಬ್ರವರಿ 12, 2023 (www.justkannada.in): ದೇಶದ ಅತಿ ಉದ್ದದ ಎಕ್ಸ್ ಪ್ರೆಸ್ ವೇ ಭಾಗವನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಲಿದ್ದಾರೆ.

ರಾಜಸ್ಥಾನದ ದೌಸಾದಲ್ಲಿ ಭಾರತದ ಅತಿ ಉದ್ದದ ಎಕ್ಸ್ ಪ್ರೆಸ್ ವೇ ಭಾಗ ಇಂದು ಲೋಕಾರ್ಪಣೆಯಾಗಲಿದೆ.

ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯ ದೆಹಲಿ-ದೌಸಾ-ಲಾಲ್ಸೋಟ್ ವಿಭಾಗವನ್ನು ಪ್ರಧಾನಿ ಇಂದು ಉದ್ಘಾಟಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಇದರ ಜತೆಗೆ 18,100 ಕೋಟಿ ರೂ.ಗಳ ರಾಷ್ಟ್ರೀಯ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಮುಖ ಯೋಜನೆ ದೆಹಲಿ ಮುಂಬೈ ಎಕ್ಸ್ಪ್ರೆಸ್ವೇ, ಅದರ ಮೊದಲ ಪೂರ್ಣಗೊಂಡ ಭಾಗವಾದ ದೆಹಲಿ – ದೌಸಾ – ಲಾಲ್ಸೋಟ್ ಅನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ