ವಿಶ್ವಕಪ್ ನಿಂದ ಹೊರಬಿದ್ದ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್…

ನವದೆಹಲಿ,ಜೂ,11,2019(www.justkannada.in): ದೇಶದ  ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ . ಇಂಗ್ಲೇಂಡ್ ನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ನಿಂದ ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಹೊರಬಿದ್ದಿದ್ದಾರೆ.

ಹೌದು, ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಶಿಖರ್ ಧವನ್ ವಿಶ್ವಕಪ್ ನಿಂದ ಹೊರಬಿದ್ದಿದ್ದಾರೆ.ಜೂನ್ 9 ರಂದು ಆಸ್ಟ್ರೇಲಿಯಾದ ವಿರುದ್ದ ನಡೆದ ಪಂದ್ಯದಲ್ಲಿ ಶಿಖರ್ ಧವನ್ನ ಗಾಯಗೊಂಡಿದ್ದರು. ಹೀಗಾಗಿ ಮೂರು ವಾರಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದು, ಈ ಹಿನ್ನೆಲೆ ಶಿಖರ್ ಧವನ್ ವಿಶ್ವಕಪ್ ಟೂರ್ನಿಯಿಂದ ಹೊರ ನಡೆದಿದ್ದಾರೆ.

ಇನ್ನು ಶಿಖರ್ ಧವನ್ ಸ್ಥಾನಕ್ಕೆ ರಿಷಿಬ್ ಪಂತ್  ಅಥವಾ ಶ್ರೇಯಸ್ಸ್ ಅಯ್ಯರ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.  ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಪಂದ್ಯ ಪಂದ್ಯದಲ್ಲಿ ಫ್ಲಾಪ್ ಆಗಿದ್ದ ಶಿಖರ್ ಧವನ್ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಸ್ಪೋಟಕ ಶತಕ ಸಿಡಿಸಿ ಟೀಂ ಇಂಡಿಯಾ ಗೆಲುವಿಗೆ ನೆರವಾಗಿದ್ದರು.

Key words: Indian team opener Shikhar Dhawan has been dropped from the World Cup.

#Indianteam #opener #ShikharDhawan #dropped  #World Cup.