ಇಂಡಿಯನ್‌ ಓಪನ್‌ ಬಾಕ್ಸಿಂಗ್‌ ಟೂರ್ನಿ: ಸೆಮಿಫೈನಲ್‌’ಗೆ ಮೇರಿಕೋಮ್

ಗುವಾಹಟಿ, ಮೇ 22, 2019 (www.justkannada.in): ಭಾರತದ ಸ್ಟಾರ್ ಮಹಿಳಾ ಬಾಕ್ಸರ್‌ ಮೇರಿ ಕೋಮ್‌, 2ನೇ ಆವೃತ್ತಿಯ ಇಂಡಿಯನ್‌ ಓಪನ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಐವರು ಪುರುಷ ಬಾಕ್ಸರ್‌ಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಮಹಿಳೆಯರ 51 ಕೆ.ಜಿ. ವಿಭಾಗದಲ್ಲಿ ಮೇರಿ, ನೇಪಾಳದ ಮಾಲಾ ರೈ ವಿರುದ್ಧ 5-0 ಬೌಟ್‌ಗಳಲ್ಲಿ ಗೆಲುವು ಪಡೆದು ಸೆಮೀಸ್‌ಗೇರಿದರು.

ಇದರೊಂದಿಗೆ ಸೆಮೀಸ್‌ನಲ್ಲಿ ಮೇರಿ, ಭಾರತದವರೇ ಆದ ನಿಖತ್‌ ಜರೀನ್‌ ವಿರುದ್ಧ ಸೆಣಸಲು ಸಜ್ಜಾಗಿದ್ದಾರೆ. ಮತ್ತೊಂದು ಕ್ವಾರ್ಟರ್‌ನಲ್ಲಿ ನಿಖತ್‌ ಜರೀನ್‌, ಭಾರತದವರೇ ಆದ ಅನಾಮಿಕ ವಿರುದ್ಧ 5-0 ಬೌಟ್‌ಗಳಲ್ಲಿ ಗೆಲುವು ಪಡೆದರು.