ಅಫ್ಘನ್ ನಿಂದ ಭಾರತೀಯ ಅಧಿಕಾರಿಗಳು ತಾಯ್ನಾಡಿಗೆ ವಾಪಸ್.

ನವದೆಹಲಿ,ಆಗಸ್ಟ್,17,2021(www.justkannada.in):  ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮೆರೆಯುತ್ತಿದ್ದು, ಈ ಮಧ್ಯೆ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿದ್ಧ  120 ಭಾರತೀಯ ಅಧಿಕಾರಿಗಳನ್ನು ವಾಪಸ್ ತವರಿಗೆ ಕರೆತರಲಾಗಿದೆ.

ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಸೇರಿದಂತೆ ಇತರ 120 ಅಧಿಕಾರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ಸಿ-17 ವಿಮಾನ ಗುಜರಾತ್ ನ ಜಾಮ್ ನಗರವನ್ನು ಆಗಮಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೂ ಮುನ್ನ ಆಫ್ಘಾನ್ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಕಾಬೂಲ್ ನಲ್ಲಿದ್ದ ಭಾರತೀಯ ರಾಯಭಾರಿ ಸೇರಿದಂತೆ ಅಧಿಕಾರಿಗಳನ್ನು ಕೂಡಲೇ ಸ್ಥಳಾಂತರಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿತ್ತು.

ಕಾಬೂಲಿನಿಂದ ರಾಯಭಾರಿ ಅಧಿಕಾರಿಗಳನ್ನು ಸ್ಥಳಾಂತರಿಸುತ್ತಿರುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿತ್ತು.  ನಂತರ ಭಾರತೀಯ ಅಧಿಕಾರಿಗಳನ್ನ ಕರೆತರಲು ಕಾಬೂಲ್ ಗೆ ವಿಮಾನವನ್ನ ಕಳುಹಿಸಲಾಗಿತ್ತು. ಕಾಬೂಲ್ ನಲ್ಲಿದ್ದ ಭಾರತೀಯ ಅಧಿಕಾರಿಗಳನ್ನ ಏರ್ ಲಿಫ್ಟ್ ಮಾಡಿ ತವರಿಗೆ ಕರೆತರಲಾಗಿದೆ.

Key words: Indian officer- return- from- Afghanistan