ಜ.8ರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಭಾರತೀಯ ಬ್ಯಾಂಕ್‌ ಅಸೋಸಿಯೇಷನ್‌ ಬೆಂಬಲ

ನವದೆಹಲಿ, ಜನವರಿ 04, 2019 (www.justkannada.in): ಕಾರ್ಮಿಕ ಒಕ್ಕೂಟಗಳು ಕರೆ ನೀಡಿರುವ ಜ.8ರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಈಗ ಭಾರತೀಯ ಬ್ಯಾಂಕ್‌ ಅಸೋಸಿಯೇಷನ್‌ ಕೂಡ ಬೆಂಬಲ ಸೂಚಿಸಿದೆ.

ಕೇಂದ್ರ ಸರಕಾರದ ಕಾರ್ಮಿಕ ಸುಧಾರಣೆ ನೀತಿ ವಿರೋಧಿಸಿ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರ್‌ಎಸ್‌ಎಸ್‌ ಅಂಗ ಸಂಸ್ಥೆ ಭಾರತೀಯ ಮಜ್ದೂರ್‌ ಸಂಘ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಗೆ ತೀರ್ಮಾನಿಸಿವೆ.

ಎಸ್‌ಬಿಐ ಸೇರಿದಂತೆ ಬ್ಯಾಂಕ್‌ ಅಸೋಸಿಯೇಷ್‌ನ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಸ್‌ಬಿಐ ತಿಳಿಸಿದೆ.