ಭಾರತದ ದಾಳಿಗೆ ತತ್ತರ: ನೆರವಿಗಾಗಿ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಮೊರೆ ಹೋದ ಪಾಕ್

ನವದೆಹಲಿ,ಮೇ,9,2025 (www.justkannada.in):   ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ 9 ಉಗ್ರರ ನೆಲೆಗಳನ್ನ ಭಾರತೀಯ ಸೇನೆ ಧ್ವಂಸಗೊಳಿಸಿದ ನಂತರ ಭಾರತದ ಮೇಲೆ ದಾಳಿಗೆ ಯತ್ನಿಸಿದ ಪಾಕಿಸ್ತಾನಕ್ಕೆ ಭಾರತ ಬಿಸಿ ಮುಟ್ಟಿಸಿದೆ. ಲಾಹೋರ್​, ರಾವಲ್​ಪಿಂಡಿ, ಕರಾಚಿ ಬಂದರು ಸೇರಿದಂತೆ ಪಾಕ್​ನ ಹಲವು ಪ್ರದೇಶಗಳು ಭಾರತದ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದು ಭಾರತೀಯ ಸೇನೆಯ ದಾಳಿಗೆ ಪಾಕ್ ತತ್ತರಿಸಿ ಹೋಗಿದೆ.

ಈ ಮಧ್ಯೆ ಭಾರತದ ದಾಳಿಯಿಂದ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿದ್ದು ಅಂತರಾಷ್ಟ್ರ ಹಣಕಾಸು ಸಂಸ್ಥೆ ಬಳಿ ಹಣಕಾಸಿನ ನೆರವಿಗಾಗಿ   ಮನವಿ ಮಾಡಿದೆ ಎನ್ನಲಾಗಿದೆ. ಟ್ವಟ್ಟರ್ ಮೂಲಕ ಪಾಕಿಸ್ತಾನ ಅಂತರಾಷ್ಟ್ರ ಹಣಕಾಸು ಸಂಸ್ಥೆ ಮತ್ತು ಇತರೆ ದೇಶಗಳಿಗೆ ಹಣಕಾಸಿನ ನೆರವಿಗಾಗಿ ಮನವಿ ಮಾಡಿದೆ.

‘ನಮಗೆ ಶತ್ರುವಿನಿಂದ ಭಾರೀ ನಷ್ಟ ಉಂಟಾಗಿದೆ. ಸದ್ಯದ ಯುದ್ಧ ಭೀತಿ ಹಾಗೂ ಷೇರು ಪೇಟೆ ಕುಸಿತದಿಂದ ನಮ್ಮ ಅಂತಾರಾಷ್ಟ್ರೀಯ ಪಾಲುದಾರರ ಬಳಿ ಹಣದ ಸಹಾಯ ಕೇಳಲಾಗಿದೆ. ಪರಿಸ್ಥಿತಿಗೆ ಕಾರಣವಾಗಿರುವ ನಿರ್ಧಾರವನ್ನು ಹಿಂಪಡೆಯಲು ಸೂಚಿಸಿ’ ಎಂದು ಪಾಕಿಸ್ತಾನ ಸರ್ಕಾರದ ಆರ್ಥಿಕ ವ್ಯವಹಾರಗಳ ವಿಭಾಗವು ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಸದ್ಯ ಪಾಕ್​ ಪರಿಸ್ಥಿತಿ ಹೀನಾಯವಾಗಿದ್ದು, ಅಮೆರಿಕಾ, ಚೀನಾ, ಯುಎಇ ಸೇರಿ ಹಲವು ದೇಶಗಳ ಬಳಿ ಇದೀಗ ಪಾಕಿಸ್ತಾನ ಸಾಲಕ್ಕೆ ಕೈಚಾಚಿರುವ ಬಗ್ಗೆ ವರದಿಯಾಗಿದೆ.

Key  words: Indian, attacks, Pakistan,  help, International Monetary Fund