Sunday, August 23, 2026

BDA Apartments

Home Front Page ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ.

ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ.

ಮುಂಬೈ,ಫೆಬ್ರವರಿ,19,2022(www.justkannada.in):  ಫೆಬ್ರವರಿ 24ರಿಂದ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡವನ್ನ ಪ್ರಕಟಿಸಲಾಗಿದೆ.

ಚೇತನ್ ಶರ್ಮಾ ನೇತೃತ್ವದ ಬಿಸಿಸಿಐನ ಹಿರಿಯ ಆಯ್ಕೆ ಸಮಿತಿಯು ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಶ್ರೀಲಂಕಾ ತಂಡದ ವಿರುದ್ಧ ಟೀಂ ಇಂಡಿಯಾ ಮೂರು ಟಿ20 ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

ಟಿ-20 ಮೊದಲ ಪಂದ್ಯ ಫೆಬ್ರವರಿ 24 ರಂದು,  ಎರಡನೇ ಪಂದ್ಯ 26 ರಂದು ಮತ್ತು ಮೂರನೇ ಪಂದ್ಯ ಫೆಬ್ರವರಿ 27 ರಂದು ನಡೆಯಲಿದೆ. ಇನ್ನು ಶ್ರೀಲಂಕಾ ಟಿ-20 ಸರಣಿಯಿಂದ ವಿರಾಟ್ ಕೊಹ್ಲಿ ಮತ್ತು ವಿಕೇಟ್ ಕೀಪರ್ ರಿಷಪ್ ಪಂತ್ ಗೆ ವಿಶ್ರಾಂತಿ ನೀಡಲಾಗಿದೆ.  ಟಿ-20 ಸರಣಿ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.

ಭಾರತ ತಂಡ  ಹೀಗಿದೆ

ಟಿ20 ತಂಡ- ಟಿ 20 ತಂಡ: ರೋಹಿತ್ ಶರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿ.ಕೀ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಬುಮ್ರಾ (ಉಪನಾಯಕ), ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಹರ್ಷಲ್ ಪಟೇಲ್, ಸಿರಾಜ್, ಸಂಜು ಸ್ಯಾಮ್ಸನ್ (ವಿ.ಕೀ), ರವೀಂದ್ರ ಜಡೇಜಾ, ಯಜುವೇಂದ್ರ ಚಹಾಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅವೇಶ್ ಖಾನ್

ಟೆಸ್ಟ್ ತಂಡ: ಟೆಸ್ಟ್ : ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭಮನ್ ಗಿಲ್, ರಿಷಬ್ ಪಂತ್, ಕೆ ಎಸ್ ಭರತ್, ಆರ್ ಅಶ್ವಿನ್ (ಫಿಟ್‌ನೆಸ್‌ಗೆ ಒಳಪಟ್ಟು), ಆರ್ ಜಡೇಜಾ, ಜಯಂತ್ ಯಾದವ್, ಕುಲದೀಪ್ ಯಾದವ್, ಜೆ ಬುಮ್ರಾ ( ಉಪನಾಯಕ), ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಸೌರಭ್ ಕುಮಾರ್.

Key words: India team- announces -Sri Lanka –series