ಶ್ರೀಲಂಕಾ ವಿರುದ್ಧ ಟೆಸ್ಟ್: ಬೌಲಿಂಗ್’ನಲ್ಲೂ ಜಡೇಜಾ ಮಿಂಚು, ಶ್ರೀಲಂಕಾಗೆ ಫಾಲೋ ಆನ್

ಬೆಂಗಳೂರು, ಮಾರ್ಚ್ 06, 2022 (www.justkannada.in): ಶ್ರೀಲಂಕಾ ವಿರುದ್ಧ ಟೆಸ್ಟ್ ನಲ್ಲಿ ಜಡೇಜಾ ಸ್ಪಿನ್ ದಾಳಿಗೆ ನಲುಗಿದ ಲಂಕಾ ತಂಡ ಕೇವಲ 174 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.

ಈ ಮೂಲಕ ಭಾರತ ತಂಡ 400 ರನ್ ಗಳ ಬೃಹತ್ ಮೊದಲ ಇನ್ನಿಂಗ್ಸ್ ಲೀಡ್ ಪಡೆದಿದೆ. ಲಂಕಾಗೆ ಫಾಲೋ ಆನ್ ಹೇರಿದೆ.

ಭೋಜನ ವಿರಾಮದ ವೇಳೆ ಲಂಕಾ 10 ರನ್ ಗೆ ಒಂದು ವಿಕೆಟ್ ಕಳೆದುಕೊಂಡಿದ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ಗೆ 574 ರನ್ ಗಳಿಸಿದ್ದ ವೇಳೆ ಡಿಕ್ಲೇರ್ ಮಾಡಿಕೊಂಡಿತ್ತು.

ರವೀಂದ್ರ ಜಡೇಜಾ ಐದು ವಿಕೆಟ್ ಕಿತ್ತರೆ, ಬುಮ್ರಾ ಮತ್ತು ಅಶ್ವಿನ್ ತಲಾ ಎರಡು ವಿಕೆಟ್ ಕಿತ್ತರು. ಒಂದು ವಿಕೆಟ್ ಶಮಿ ಪಾಲಾಯಿತು.