ಭಾರತ- ದಕ್ಷಿಣಾ ಆಫ್ರಿಕಾ ಟಿ-20 ಪಂದ್ಯ: ಭಾನುವಾರ ಮೆಟ್ರೋ ಸಂಚಾರ ಅವಧಿ ವಿಸ್ತರಣೆ.

ಬೆಂಗಳೂರು,ಜೂನ್,16,2022(www.justkannada.in): ಜೂನ್ 19 ಭಾನುವಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಅಂತಿಮ ಟಿ-20 ಪಂದ್ಯಾವಳಿ ಹಿನ್ನೆಲೆ ಸಾರ್ವಜನಿಕರ ಅನುಕೂಲಕ್ಕಾಗಿ  ಅಂದು ಮೆಟ್ರೋ  ಸಂಚಾರದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ ಬಿಎಂಆರ್​ಸಿಎಲ್​, ಭಾರತ ಮತ್ತು ಆಫ್ರಿಕಾ ತಂಡಗಳ ನಡುವಿನ ಪಂದ್ಯಾವಳಿ ಹಿನ್ನೆಲೆ ಮೆಟ್ರೋ ಅವಧಿಯನ್ನು ವಿಸ್ತರಿಸಲಾಗಿದೆ. ಭಾನುವಾರ ಮಧ್ಯರಾತ್ರಿ ಒಂದು ಗಂಟೆಯವರೆಗೆ ಮೆಟ್ರೋ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದೆ.

ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಪ್ರಯಾಣಿಕರ ದಟ್ಟಣೆ  ನೀಗಿಸಲು ಪೇಪರ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಪಂದ್ಯ ನಡೆಯುವ  ಜೂನ್ 19ರ  ಮಧ್ಯಾಹ್ನ 3 ಗಂಟೆಯಿಂದ ಮೆಟ್ರೋ ಪ್ರಯಾಣಿಕರಿಗೆ ಪೇಪರ್ ಟಿಕೆಟ್ ನೀಡಲಾಗುತ್ತದೆ. ಒಂದು ಟಿಕೆಟ್ ಬೆಲೆಯನ್ನು 50 ರೂಪಾಯಿ ನಿಗದಿ ಮಾಡಲಾಗಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

ಈಗಾಗಲೇ ಮೂರು ಟಿ-20 ಪಂದ್ಯಗಳು ಮುಗಿದಿದ್ದು 2-1ರಲ್ಲಿ ದಕ್ಷಿಣ ಆಫ್ರಿಕಾ ಮುನ್ನಡೆ ಸಾಧಿಸಿದೆ. ನಾಳೆ 4ನೇ ಟಿ-20 ಪಂದ್ಯ ನಡೆಯಲಿದ್ದು ಸರಣಿ ಉಳಿಯಬೇಕಾದರೇ ಟೀಂ ಇಂಡಿಯಾ ನಾಳಿನ ಪಂದ್ಯದಲ್ಲಿ ಗೆಲ್ಲಲೇ ಬೇಕಿದೆ.  ಐದನೇ ಹಾಗೂ ಕೊನೆಯ ಪಂದ್ಯ ಭಾನುವಾರ ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Key words: India – South Africa -T20- match-Sunday -Metro – Extension.