Sunday, August 23, 2026

BDA Apartments

Home Front Page ಭಾರತದಲ್ಲಿ ಒಂದೇ ದಿನ 5611 ಹೊಸ ಕೊರೊನಾ ಪ್ರಕರಣ ಪತ್ತೆ: 140 ಜನ ಸಾವು

ಭಾರತದಲ್ಲಿ ಒಂದೇ ದಿನ 5611 ಹೊಸ ಕೊರೊನಾ ಪ್ರಕರಣ ಪತ್ತೆ: 140 ಜನ ಸಾವು

ದೆಹಲಿ, ಮೇ 20, 2020 (www.justkannada.in): ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ.

ಒಂದೇ ದಿನ ದೇಶಾದ್ಯಂತ 5611 ಹೊಸ ಪ್ರಕರಣಗಳು ದಾಖಲಾಗಿದೆ. ಈವರೆಗಿನ ಅಂಕಿ ಅಂಶಗಳ ಪೈಕಿ ದಿನವೊಂದರಲ್ಲಿ ಪತ್ತೆಯಾದ ಅತಿ ಹೆಚ್ಚು ಸೋಂಕು ಇದಾಗಿದೆ.

ಕಳೆದ 24 ಗಂಟೆಯಲ್ಲಿ 140 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆಯಲ್ಲೂ ನಿನ್ನೆ ದಾಖಲೆ ಬರೆದಿದೆ. ಈ ಮೂಲಕ ಒಟ್ಟಾರೆ ಭಾರತದಲ್ಲಿ ಕೊವಿಡ್ ಪ್ರಕರಣ ಸಂಖ್ಯೆ 106750ಕ್ಕೆ ಜಿಗಿದಿದೆ.

ಪ್ರಸ್ತುತ ದೇಶದಲ್ಲಿ 61149 ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಆಸ್ಪತ್ರೆ ಹಾಗೂ ಕೊವಿಡ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ 3303 ಜನರು ಕೊರೊನಾಗೆ ಬಲಿಯಾಗಿದ್ದಾರೆ.