1983 ರ ಕ್ರಿಕೆಟ್ ವಿಶ್ವ ಕಪ್ ವಿಜೇತ ಭಾರತ ತಂಡದ ಆಟಗಾರರ ವೇತನ ಬಹಿರಂಗಗೊಳಿಸಿದ ‘ಪೇಸ್ಲಿಪ್’..!

 

ನವ ದೆಹಲಿ, ನವೆಂಬರ್ ೧೧, ೨೦೨೧ (www.justkannada.in): ೧೯೮೩ – ಅದು ಭಾರತೀ ಕ್ರಿಕೆಟ್ ಕ್ಷೇತ್ರದಲ್ಲಿ ಕ್ರಾಂತಿಯನ್ನ ಸೃಷ್ಟಿಸಿದ ವರ್ಷ, ಲಕ್ಷಾಂತರ ಭಾರತೀಯರನ್ನು ಪ್ರೇರೇಪಿಸಿದ ವರ್ಷ. ಭಾರತೀ ಕ್ರಿಕೆಟ್ ಇತಿಹಾಸದಲ್ಲೇ ಮಹೋನ್ನತ ಕ್ರಿಕೆಟ್ ಗೆಲುವನ್ನು ಸೃಷ್ಟಿಸಿದಂತಹ ವರ್ಷವದು.

ಎಲ್ಲಾ ಆಕ್ಷೇಪಗಳನ್ನು ಲೆಕ್ಕಿಸದೆ, ಕ್ರಿಕೆಟ್ ಪಂಡಿತರು ಯಾವುದು ಅಸಾಧ್ಯ ಎಂದು ಪರಿಗಣಿಸಿದ್ದರೋ ಅದನ್ನು ಸಾಧಿಸಲು ಸಜ್ಜಾಗಿ ಹೊರಟಂತಹ ಭಾರತದ ತಂಡ, ಮೊಟ್ಟ ಮೊದಲ ಬಾರಿಗೆ ಐಸಿಸಿ ಕ್ರಿಕೆಟ್ ವಿಶ್ವ ಕಪ್ ಟ್ರೋಫಿಯನ್ನು ಗೆದ್ದಂತಹ ವರ್ಷವದು. ಆ ವಿಶ್ವ ಕಪ್ ಮುಂದಿನ ತಲೆಮಾರಿನ ಯುವಜನರಿಗೆ ಪ್ರೇರಣೆ ಒದಗಿಸಿ, ಭಾರತೀಯ ಕ್ರಿಕೆಟ್ ತಂಡದ ಶ್ರೇಷ್ಠತೆಯನ್ನು ಮರುರಚಿಸಿತು.

ಇಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇಡೀ ವಿಶ್ವದಲ್ಲೇ ಅತೀ ಶ್ರೀಮಂತ ಕ್ರಿಕೆಟ್ ಬೋರ್ಡ್ ಎಂದು ಗುರುತಿಸಿಕೊಂಡಿದೆ. ಬಿಸಿಸಿಐ ಸುಮಾರು ರೂ.೧೪,೦೦೦ ಕೋಟಿಯ ಮೌಲ್ಯ ಹೊಂದಿದೆ ಎಂದರೆ ಅಂತಾರಾಷ್ಟ್ರೀ ಮಟ್ಟದಲ್ಲಿ ನಮ್ಮ ರಾಷ್ಟ್ರವನ್ನು ಪ್ರತಿನಿಧಿಸುವ ಈಗಿನ ಪ್ರತಿಯೊಬ್ಬ ಆಟಗಾರರು ಎಷ್ಟು ಗಳಿಸುತ್ತಾರೆ ಎಂದು ನೀವು ಅಂದಾಜಿಸಬಹುದು.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ೧೯೮೩ರಲ್ಲಿ ನಮಗೆ ವಿಶ್ವ ಕಪ್ ಅನ್ನು ಗೆದ್ದುಕೊಟ್ಟ ತಂಡದ ಸದಸ್ಯರ ವೇತನದ ಬಗ್ಗೆ ನಿಮಗೆ ತಿಳಿದರೆ ಅತ್ಯಾಶ್ಚರ್ಯ ಪಡುವಿರಿ.

೧೯೮೩ ಕ್ರಿಕೆಟ್ ವಿಶ್ವ ಕಪ್ ಗೆದ್ದುಕೊಟ್ಟಂತಹ ಕಪಿಲ್ ದೇವ್ ನೇತೃತ್ವದ ತಂಡದ ಪ್ರತಿಯೊಬ್ಬ ಸದಸ್ಯರೂ ದಿನವೊಂದಕ್ಕೆ ರೂ.೨೦೦ರ ಜೊತೆಗೆ ಪ್ರತಿ ಮ್ಯಾಚ್ಗೆ ರೂ.೧,೫೦೦ ಸಂಭಾವನೆ ಪಡೆದಿದ್ದರು ಎಂದರೆ ನಂಬುವಿರಾ?

ಆದರೆ ಇದು ಸತ್ಯ. ಅಂದರೆ ಇಡೀ ವಿಶ್ವ ಕಪ್ನಲ್ಲಿ ನಡೆದಂತಹ ಎಲ್ಲಾ ಮ್ಯಾಚ್ಗಳಿಗೂ ಸೇರಿದಂತೆ ಪ್ರತಿಯೊಬ್ಬ ಸದಸ್ಯರಿಗೆ ದೊರೆತಂತಹ ಸಂಭಾವನೆ ಎಷ್ಟು ಗೊತ್ತ?… ಕೇವಲ ರೂ.೨೩,೦೦೦ ರೂ.ಗಳು.

ಆದರೆ ಇಂದು ಭಾರತದ ಕ್ರಿಕೆಟ್ ಆಟಗಾರರು ಪ್ರತಿಯೊಬ್ಬರು ಕೋಟಿಗಟ್ಟಲೇ ಹಣ ಗಳಿಸುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೋಹ್ಲಿ ಪ್ರತಿ ವರ್ಷ ರೂ.೭ ಕೋಟಿ ಗಳಿಸುತ್ತಿದ್ದಾರೆ, ಇದರಲ್ಲಿ ಐಪಿಎಲ್ನಿಂದ ಅವರಿಗೆ ಬರುವ ಆದಾಯ ಸೇರಿಸಿಲ್ಲ.

ರಣಜಿ ಟ್ರೋಫಿ ಆಟಗಾರರು ನಾಲ್ಕು ದಿನಗಳ ಟೂರ್ನಿಗೆ ಪ್ರತಿ ದಿನಕ್ಕೆ ರೂ.೩೫,೦೦೦ ಗಳಿಸುತ್ತರೆ. ಈ ಲೆಕ್ಕದ ಪ್ರಕಾರ ೧೯೮೩ರ ವಿಶ್ವ ಕಪ್ ಆಟಗಾರರಿಗೆ ಇಡೀ ಟೂರ್ನಿಗೆ ದೊರೆತಂತಹ ಸಂಭಾವನೆ ಕೇವಲ ರೂ.೨೯,೪೦೦ ಆಗಿತ್ತು. ಅತ್ಯಾಶ್ಚರ್ಯವಲ್ಲ. ಅದು ಅಂತಹ ಕಾಲ… ಪುನಃ ಎಂದಿಗೂ ಮರಳಿ ಬರದೇ ಇರುವಂತಹ ಕಾಲ. ಹೌದಲ್ಲವೇ?

ಸುದ್ದಿ ಮೂಲ: ದಿ ಕ್ವಿಂಟ್

key words : India-cricket-world-cup-winner-players-salary-slip