Tuesday, September 22, 2026

BDA Apartments

Home Front Page ಭಾರತ-ಆಸಿಸ್ 3ನೇ ಟೆಸ್ಟ್: ರಾಷ್ಟ್ರಗೀತೆ ಹಾಡುವ ವೇಳೆ ಭಾವುಕರಾಗಿ ಕಣ್ಣೀರು ಸುರಿಸಿದ ಸಿರಾಜ್

ಭಾರತ-ಆಸಿಸ್ 3ನೇ ಟೆಸ್ಟ್: ರಾಷ್ಟ್ರಗೀತೆ ಹಾಡುವ ವೇಳೆ ಭಾವುಕರಾಗಿ ಕಣ್ಣೀರು ಸುರಿಸಿದ ಸಿರಾಜ್

ಸಿಡ್ನಿ, ಜನವರಿ 07, 2021 (www.justkannada.in): ರಾಷ್ಟ್ರಗೀತೆ ಹಾಡುವ ವೇಳೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವ ಸಿರಾಜ್ ಕಣ್ಣೀರು ಹಾಕಿರುವ ವಿಡೀಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.

ತಂದೆಯ ಸಾವಿನ ಸುದ್ದಿ ತಿಳಿದರೂ ಅವರ ಕನಸನ್ನು ಸಾಕಾರಗೊಳಿಸಲು ಅಂತ್ಯಸಂಸ್ಕಾರಕ್ಕೂ ತೆರಳದೇ ಆಸೀಸ್ ನೆಲದಲ್ಲೇ ಉಳಿದ ಸಿರಾಜ್ ಮೆಲ್ಬೋರ್ನ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಈ ಮೂಲಕ ತಂದೆಯ ಕನಸು ನನಸು ಮಾಡಿದ್ದರು.

ತೃತೀಯ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವ ವೇಳೆ ಸಿರಾಜ್ ಭಾವುಕರಾಗಿದ್ದಾರೆ.