ಸಚಿವ ಸ್ಥಾನಕ್ಕೆ ರಾಜೀನಾಮೆ  ನೀಡಿ ಮುಂಬೈನತ್ತ ಹೊರಟ ಪಕ್ಷೇತರ ಶಾಸಕ ಆರ್. ಶಂಕರ್…

kannada t-shirts

ಬೆಂಗಳೂರು,ಜು,8,2019(www.justkannada.in):  ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ  ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಪ್ರಯಾಣ ಬೆಳೆಸಿದ ಬೆನ್ನಲ್ಲೆ ಇದೀಗ ಮತ್ತೊಬ್ಬ ಪಕ್ಷೇತರ ಶಾಸಕ ಆರ್. ಶಂಕರ್ ಅದೇ ದಾರಿ ಹಿಡಿದಿದ್ದಾರೆ.

ಆರ್. ಶಂಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ದೋಸ್ತಿಗೆ ಮತ್ತೊಂದು ಶಾಕ್ ನೀಡಿದ್ದಾರೆ ಎನ್ನಲಾಗಿದೆ. ರಾಜೀನಾಮೆ ಪತ್ರವನ್ನ ರಾಜಭವನಕ್ಕೆ ತಲುಪಿಸಿ ಆರ್. ಶಂಕರ್ ಕೆಎಐಎಲ್ ವಿಮಾನ ನಿಲ್ದಾಣದ ಮೂಲಕ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಆರ್. ಶಂಕರ್ ಕೂಡ ಅತೃಪ್ತ ಶಾಸಕರ ಗುಂಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

Key words: independent MLA-R. Shankar- Resignation-mumbai

website developers in mysore