ಚಿಲ್ಲರೆ ಕಾಸಿನಲ್ಲೇ 25,000 ರೂ.ಗಳನ್ನು ಠೇವಣಿ ಇಟ್ಟ ಪಕ್ಷೇತರ ಅಭ್ಯರ್ಥಿ. ಯಾಕೆ ಗೊತ್ತ..?

Independent candidate ̲  pays Rs 25,000 ̲ in coins ̲  for Lok Sabha election ̲  security deposit ̲  Here's why

ಬೆಂಗಳೂರು, ಮಾ.೨೧, ೨೦೨೪ : ಮಧ್ಯಪ್ರದೇಶದ ಜಬಲ್‌ಪುರದ ನಿವಾಸಿಯೊಬ್ಬರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದಾಗ ಎಲ್ಲರಿಗೂ ಅಚ್ಚರಿ.

ಕಾರಣ, ಈ ಅಭ್ಯರ್ಥಿ,  25,000 ರೂಪಾಯಿ ಭದ್ರತಾ ಠೇವಣಿ ಮೊತ್ತವನ್ನು ಸಂಪೂರ್ಣವಾಗಿ ನಾಣ್ಯಗಳಲ್ಲಿ ಪಾವತಿಸಿದ್ದು ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿತು. ವಿನಯ್ ಚಕ್ರವರ್ತಿ ಎಂಬ ಪಕ್ಷೇತರ ಅಭ್ಯರ್ಥಿ, 10, 5 ಮತ್ತು 2 ರೂಪಾಯಿಗಳ ನಾಣ್ಯಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಹಣ ಪಾವತಿಸಿದ್ದಾರೆ.

ಠೇವಣಿ ಪಾವತಿಸಿದ ನಂತರ ಚಕ್ರವರ್ತಿ ಪಿಟಿಐ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು 10, 5 ಮತ್ತು 2 ರೂಪಾಯಿಗಳ ಮುಖಬೆಲೆಯ 25,000 ರೂ. ಗಳನ್ನು ಪಾವತಿಸಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಜಿಟಲ್ ಅಥವಾ ಆನ್‌ಲೈನ್ ಪಾವತಿ ಸೌಲಭ್ಯಗಳು ಇಲ್ಲದಿರುವುದರಿಂದ ಈ ರೀತಿ ಹಣ ಪಾವತಿ ಮಾಡಬೇಕಾಯಿತು ಎಂದರು.

ಜಬಲ್ಪುರ್ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ದೀಪಕ್ ಕುಮಾರ್ ಸಕ್ಸೇನಾ ಅವರು ಚಕ್ರವರ್ತಿ ಅವರ ನಾಣ್ಯ ಪಾವತಿಯ ರಸೀದಿಯನ್ನು ಖಚಿತಪಡಿಸಿದ್ದಾರೆ. ” ಅಭ್ಯರ್ಥಿಯಿಂದ ನಾಣ್ಯಗಳಲ್ಲಿ ಮಾಡಿದ ಪಾವತಿಯನ್ನು ಸ್ವೀಕರಿಸಲಾಗಿದೆ ಮತ್ತು ಅದರ ರಶೀದಿಯನ್ನು ಅವರಿಗೆ ನೀಡಲಾಗಿದೆ” ಎಂದು ಸಕ್ಸೇನಾ ಹೇಳಿದರು.

ಮುಂಬರುವ ಚುನಾವಣೆಯ ಆರಂಭಿಕ ಹಂತದ ನಾಮಪತ್ರ ಸಲ್ಲಿಕೆ ಸದ್ಯಕ್ಕೆ ನಡೆಯುತ್ತಿದೆ.

ಮಧ್ಯಪ್ರದೇಶದ ಆರು ಸ್ಥಾನಗಳಿಗೆ ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಉಮೇದುವಾರಿಕೆಯನ್ನು ಹಿಂಪಡೆಯಲು ಮಾರ್ಚ್ 30 ಕೊನೆಯ ದಿನವಾಗಿದೆ.

ಮಾರ್ಚ್ 16 ರಂದು ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

ಕೃಪೆ : ಮನಿ ಕಂಟ್ರೋಲ್‌ ನ್ಯೂಸ್‌

Key words : Independent candidate ̲  pays Rs 25,000 ̲ in coins ̲  for Lok Sabha election ̲  security deposit ̲  Here’s why

english summary :

A resident of Jabalpur, Madhya Pradesh stunned officials by paying a security deposit of Rs 25,000 entirely in coins at the collector’s office on Wednesday to contest the upcoming Lok Sabha elections as an Independent candidate. Vinay Chakraborty arrived at the office armed with the amount in denominations of Rs 10, Rs 5, and Rs 2 coins.