Sunday, September 20, 2026

BDA Apartments

ದೇಶದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾಗುತ್ತಿರುವ ಪ್ರಮಾಣದಲ್ಲಿ ಏರಿಕೆ… ...
Home Front Page ದೇಶದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾಗುತ್ತಿರುವ ಪ್ರಮಾಣದಲ್ಲಿ ಏರಿಕೆ….

ದೇಶದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾಗುತ್ತಿರುವ ಪ್ರಮಾಣದಲ್ಲಿ ಏರಿಕೆ….

ನವದೆಹಲಿ,ಜು,30,2020(www.justkannada.in0:  ದೇಶದಲ್ಲಿ ಕೊರೋನಾ  ಸೋಂಕಿತರ ಸಂಖ್ಯೆ ದಿನೇ ದಿನೇ  ಹೆ್ಚ್ಚುತ್ತಿದ್ದರೇ ಇತ್ತ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಹೌದು. ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.jk-logo-justkannada-logo

ಏಪ್ರಿಲ್‌ನಲ್ಲಿ 7.85% ಇದ್ದ ಚೇತರಿಕೆ ಪ್ರಮಾಣ ಇದೀಗ 64.4% ಆಗಿದೆ. ದೇಶದಲ್ಲಿ 10 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ ಎಂದು  ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲಿ ಕೋವಿಡ್ -19 ರಿಂದ 1 ದಶಲಕ್ಷಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ. ಕೊರೋನಾ ವಾರಿಯರ್ಸ್ ನೆರವಿನಿಂದ ಕೊರೋನಾ ಕಂಟ್ರೋಲ್ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಕೊರೋನಾ ವಾರಿಯರ್ಸ್ ಸೇವೆಯನ್ನ ಶ್ಲಾಘಿಸಿದೆ.increasing-cure-corona-infections-country

ದೇಶದ 16 ರಾಜ್ಯಗಳಲ್ಲಿ ಸೋಂಕಿನಿಂದ ಗುಣಮುಖರಾಗುವ ಸಂಖ್ಯೆ ಏರಿಕೆಯಾಗಿದೆ.  ದೆಹಲಿ, ಲಡಾಖ್ ಹರಿಯಾಣ, ಅಸ್ಸಾಂ ಸೇರಿ ಹಲವು ರಾಜ್ಯಗಳಲ್ಲಿ ಕೊರೋನಾದಿಂದ ಚೇತರಿಕೆಯಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ. ಇನ್ನು. 24 ಗಂಟೆಗಳಲ್ಲಿ 4.4  ಲಕ್ಷ ಟೆಸ್ಟ್ ಮಾಡಿದ್ದೇವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Key words: Increasing –cure-corona- infections – country