ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಳ.

ಮೈಸೂರು,ಜುಲೈ,6,2023(www.justkannada.in): ಕೇರಳದಲ್ಲಿ‌ ಮಳೆಯಾಗುತ್ತಿರುವ ಹಿನ್ನೆಲೆ, ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಯದ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.

ಕಬಿನಿ ಜಲಾಶಯಕ್ಕೆ  ಸದ್ಯ 10781 ಕ್ಯೂಸೆಕ್ ಒಳಹರಿವಿದ್ದು,  ಎರಡೇ ದಿನಕ್ಕೆ ಆರು ಅಡಿ ನೀರು ಸಂಗ್ರಹವಾಗಿದೆ. ಸದ್ಯ ‌56.69 ಅಡಿಯಷ್ಟು ಜಲಾಶಯ ತುಂಬಿದೆ. ಕಬಿನಿ ಜಲಾಶಯ 84 ಅಡಿ ಗರಿಷ್ಠ ಪ್ರಮಾಣದ ನೀರು ಸಂಗ್ರಹಿಸುವ ಸಾಮರ್ಥ್ಯ  ಹೊಂದಿದೆ.

ಸರಿಯಾಗಿ ಮಳೆಯಾಗದ ಹಿನ್ನೆಲೆ ಮೂರು ದಿನಗಳ ಹಿಂದೆ ಜಲಾಶಯದ ನೀರಿನ ಮಟ್ಟ 50 ಅಡಿಗೆ ಕುಸಿದಿತ್ತು. ಇದೀಗ ಕೇರಳದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಕಬಿನಿ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.

Key words: Increase – inflow rate – Kabini Reservoir.