ಮೈಸೂರಿನಲ್ಲಿ ಲೋಕ ಅದಾಲತ್: ಮತ್ತೆ ಒಂದಾದ 29 ಜೋಡಿಗಳಿಗೆ ಶುಭಹಾರೈಕೆ…

ಮೈಸೂರು,ಮಾರ್ಚ್,27,2021(www.justkannada.in): ಸಾಂಸಾರಿಕ ಜೀವನದಲ್ಲಿ ಬಿರುಕು ಮೂಡಿ ದೂರವಾಗಿದ್ದ ಒಂದಲ್ಲ ಎರಡಲ್ಲ ಬರೋಬ್ಬರಿ 29 ಜೋಡಿಗಳು ಇಂದು ಮೈಸೂರಿನಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಒಂದಾದರು.jk

ಇಂದು ಮೈಸೂರಿನಲ್ಲಿ ಲೋಕ ಅದಾಲತ್ ಅತ್ಯಂತ ಯಶಸ್ವಿಯಾಗಿ ನಡೆಯಿತು. ಸಾಂಸಾರಿಕ ಜೀವನದಲ್ಲಿ ಬಿರುಕು ಮೂಡಿ ದೂರವಾಗಿದ್ದ ಒಂದಲ್ಲ ಎರಡಲ್ಲ ಬರೋಬ್ಬರಿ 29 ಜೋಡಿಗಳು ಇಂದಿನ ಲೋಕ ಅದಾಲತ್‌ನಲ್ಲಿ ಮೈಸೂರು ಜಿಲ್ಲಾ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಹಾಗೂ ಎನ್ ಎಸ್ ಪಾಟೀಲ್ ಸಮ್ಮುಖದಲ್ಲಿ ಮತ್ತೆ ಒಂದಾದರು.lok-adalat-judge-ramachandra-d-huddar-mysore-29-couples-together

ಎಲ್ಲಾ ಜೋಡಿಗಳಿಗೂ ಹೂ ಗುಚ್ಛ ನೀಡಿದ ಮೈಸೂರು ಜಿಲ್ಲಾ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಹಾಗೂ ಎನ್ ಎಸ್ ಪಾಟೀಲ್ ಮುಂದಿನ ಸಾಂಸಾರಿಕ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು. ಮುರಿದು ಹೋಗಿದ್ದ ಸಂಸಾರಗಳನ್ನು ಒಂದು ಮಾಡಿದ ನ್ಯಾಯಮೂರ್ತಿಗಳ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ವಕೀಲರ ಸಹಕಾರವನ್ನು ಸ್ಮರಿಸಲಾಯಿತು.

Key words: Lok Adalat – Judge -Ramachandra D Huddar -Mysore-29 couples- together