ಒಳ ಹರಿವಿನಲ್ಲಿ ಹೆಚ್ಚಳ: ಕಬಿನಿ, ಕೆಆರ್ ಎಸ್ ಜಲಾಶಯಗಳಿಗೆ ಬಂತು ಜೀವಕಳೆ

ಮೈಸೂರು,ಜುಲೈ,11,2024 (www.justkannada.in):  ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಬೀಳುತ್ತಿದ್ದು, ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. ಹೀಗಾಗಿ ಕೃಷಿಯನ್ನೇ ನಂಬಿರುವ  ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಅಂತೆಯೇ ಕಾವೇರಿ, ಕಪಿಲಾ ಕೊಳ್ಳದಲ್ಲಿ ಉತ್ತಮ ಮಳೆ ಹಿನ್ನಲೆ ಕಬಿನಿ, ಕೆಆರ್ ಎಸ್ ಜಲಾಶಯಗಳಿಗೆ  ಜೀವಕಳೆ ಬಂದಿದೆ.

ಕಬಿನಿ ಜಲಾಶಯ ಬಹುತೇಕ ಭರ್ತಿ ಯಾದ ಹಿನ್ನಲೆ, ಜಲಾಶಯದ ಹೊರ ಹರಿವಿನಲ್ಲಿ ಹೆಚ್ಚಳವಾಗಿದೆ. ಜಲಾಶಯದಿಂಧ 5000 ಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನ ನದಿಗೆ ಬಿಡುಗಡೆ ಮಾಡಲಾಗಿದೆ. ಜಲಾಶಯಕ್ಕೆ ಹರಿದು ಬರುವ ಒಳ ಹರಿವಿನಲ್ಲೂ ಹೆಚ್ಚಳವಾಗಿದೆ. ಇಂದು 5,870 ಕ್ಯೂಸೆಕ್ಸ್ ಒಳಹರಿವಿದೆ. ಜಲಾಶಯದ ಒಟ್ಟು ಸಾಮರ್ಥ್ಯ 19.52 ಟಿಎಂಸಿ. ಜಲಾಶಯದ ಇಂದಿನ ಸಾಮರ್ಥ್ಯ 18.69 ಟಿಎಂಸಿ.

ಇತ್ತ  ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆಆರ್ ಎಸ್ ಜಲಾಶಯದಲ್ಲೂ ಒಳ ಹರಿವಿನಲ್ಲಿ ಹೆಚ್ಚಳವಾಗಿದ್ದು, ನೀರಿನ ಮಟ್ಟ 104 ಅಡಿ ದಾಟಿದೆ. ಕೆಆರ್ ಎಸ್ ಜಲಾಶಯಕ್ಕೆ ಒಳ ಹರಿವು 7,267 ಕ್ಯೂಸೆಕ್ ಇದ್ದು,  2250 ಕ್ಯೂಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ. ಜಲಾಶಯದ ಒಟ್ಟು ಸಾಮರ್ಥ್ಯ 49.452 ಟಿಎಂಸಿ ಇದ್ದು ಜಲಾಶಯದ ಈಗಿನ ನೀರಿನ ಸಾಮರ್ಥ್ಯ 26.284 ಟಿಎಂಸಿ ಇದೆ.

Key words: Increase, inflow, Kabini, KRS reservoirs