ಏ.18 ರಂದು ಅಲ್ಲಮ ರಿಸರ್ಚ್ ಅಂಡ್ ಕಲ್ಚರಲ್ ಫೌಂಡೇಷನ್ ಸಂಸ್ಥೆ ಉದ್ಘಾಟನೆ: ಪ್ರಜಾ ಪ್ರಭುತ್ವ ಕುರಿತು ವಿಚಾರ ಸಂಕಿರಣ…

ಮೈಸೂರು ಏ,15,2021(www.justkannada.in):  ಅಲ್ಲಮ  ರಿಸರ್ಚ್ ಅಂಡ್ ಕಲ್ಚರಲ್ ಫೌಂಡೇಷನ್ ವತಿಯಿಂದ ಏಪ್ರಿಲ್ 18 ರ ಭಾನುವಾರ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ನಾಲ್ಕು ಅಂಗಗಳನ್ನು ಕುರಿತ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa

ರಾಮಕೃಷ್ಣ ನಗರದ ನೃಪತುಂಗ ಕನ್ನಡ ಶಾಲೆಯ ಆವರಣದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ಅಶೋಕ್ ಜಿ.ನಿಜಗಣ್ಣನವರ್ ಅವರು ಅಲ್ಲಮ ಸಂಸ್ಥೆಯನ್ನು ಉದ್ಘಾಟಿಸಿ, ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಅವರು  ಪ್ರಜಾ ಪ್ರಭುತ್ವ ಮತ್ತು ನ್ಯಾಯಾಂಗ ಕುರಿತು ಮಾತನಾಡಲಿದ್ದಾರೆ.Inauguration - Allama Research and Cultural Foundation- Seminar

ವಿಚಾರಣ ಸಂಕಿರಣದಲ್ಲಿ ಮಾಜಿ ಶಾಸಕ ಹಾಗೂ ರಾಜಕೀಯ ಚಿಂತಕ ವೈಎಸ್ ವಿ ದತ್ತ ಪ್ರಜಾಪ್ರಭುತ್ವ ಮತ್ತು ಶಾಸಕಾಂಗ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಿ.ಪಿ ಪ್ರಕಾಶ್ ಅವರು ಪ್ರಜಾಪ್ರಭುತ್ವ ಮತ್ತು ಕಾರ್ಯಾಂಗದ ಬಗ್ಗೆ ಮಾತನಾಡಲಿದ್ದಾರೆ.

Key words: Inauguration – Allama Research and Cultural Foundation- Seminar