ವೀಕೆಂಡ್ ಕರ್ಫ್ಯೂ: ನಾಳೆ (ಆ.7) ಮೈಸೂರು ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಭೌತಿಕ ತರಗತಿ ಬದಲಿಗೆ ಆನ್‌ಲೈನ್‌ನಲ್ಲೇ ತರಗತಿ

ಮೈಸೂರು: ಆ.7ರಂದು ಮೈಸೂರು ವಿಶ್ವವಿದ್ಯಾನಿಲಯದ ಎಲ್ಲಾ ಸ್ನಾತಕೋತ್ತರ ಕೇಂದ್ರಗಳು, ವಿವಿ ವ್ಯಾಪ್ತಿಯಲ್ಲಿರುವ ಎಲ್ಲಾ ಸ್ನಾತಕ/ಸ್ನಾತಕೋತ್ತರ ತರಗತಿಗಳು ಹಾಗೂ ಕಚೇರಿಗಳಿಗೆ ಹಾಜರಾಗುವುದಕ್ಕೆ ವಿನಾಯಿತಿ ನೀಡಲಾಗಿದೆ.

ಕೊರೊನಾ ಮೂರನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಮೈಸೂರು ಸೇರಿದಂತೆ ಗಡಿಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಘೋಷಿಸಿರುವುದರಿಂದ ವಿವಿ ವ್ಯಾಪ್ತಿಯಲ್ಲಿರುವ ಎಲ್ಲಾ ಸ್ನಾತಕ/ಸ್ನಾತಕೋತ್ತರ ತರಗತಿಗಳು ಹಾಗೂ ಕಚೇರಿಗಳಿಗೆ ಹಾಜರಾಗುವುದಕ್ಕೆ ವಿನಾಯಿತಿ ನೀಡಲಾಗಿದೆ.

ಎಲ್ಲಾ ಬೋಧಕ ವರ್ಗದವರು ವೇಳಾಪಟ್ಟಿಗನುಗುಣವಾಗಿ ಮನೆಯಿಂದಲೇ ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಬೇಕು. ಬೋಧಕೇತರ ಸಿಬ್ಬಂದಿ ತುರ್ತು ಅಗತ್ಯ ಕೆಲಸಗಳನ್ನು ತಮ್ಮ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಕಚೇರಿ ಅಥವಾ ಮನೆಯಿಂದಲೇ ಕಾರ‌್ಯ ನಿರ್ವಹಿಸಲು ಸೂಚಿಸಲಾಗಿದೆ ಎಂದು ಮೈವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.