ದೇಶದಲ್ಲಿ ಮಹತ್ವದ ಅಭಿವೃದ್ದಿ: ಎನ್ ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಆಶೀರ್ವಾದ ಸಿಗುವ ವಿಶ್ವಾಸ-ಪ್ರಧಾನಿ ಮೋದಿ.

ನವದೆಹಲಿ,ಫೆಬ್ರವರಿ,10,2024(www.justkannada.in):  ಕಳೆದ ಐದು ವರ್ಷಗಳಲ್ಲಿ ಮಹತ್ವದ ಅಭಿವೃದ್ದಿಯಾಗಿದ್ದು ಎನ್ ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಆಶೀರ್ವಾದ ಸಿಗುವ ವಿಶ್ವಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

17ನೇ ಲೋಕಸಭೆಯ ಕೊನೇ ಅಧೀವೇಶನದ ಕೊನೆಯ ದಿನವಾದ ಇಂದು ಮಾತನಾಡಿದ ಪ್ರಧಾನಿ ನರೇಂಧ್ರ ಮೋದಿ,   ಎನ್ ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಜನಾಶೀರ್ವಾದ ಸಿಗುವ ವಿಶ್ವಾಸವಿದೆ. ಇವತ್ತಿನ ದಿನ ರಾಜಕೀಯದಲ್ಲಿ ಮಹತ್ವದ ದಿನ ಆಗಿದೆ. 5 ವರ್ಷದಲ್ಲಿ ದೇಶದಲ್ಲಿ ಮಹತ್ವದ ಅಭಿವೃದ್ದಿಯಾಗಿದೆ. ದೇಶದಲ್ಲಿ ಬದಲಾವಣೆಗಳು ಆಗಿದೆ.  ನಾವು ಮತ್ತೊಮ್ಮೆ ಗೆಲ್ಲುವ ವಿಶ್ವಾಸವಿದೆ. 5 ವರ್ಷದಲ್ಲಿ ನಮ್ಮ ವಿರುದ್ದ ಹಲವು ಆರೋಪಗಳು ಬಂದವು. ಆದರೆ ಅದಕ್ಕೆ ನಾವು ತಲೆ ಕೆಡಿಸಿಕೊಳ್ಳಲಿಲ್ಲ ಎಂದರು.

ಕಳೆದ 5 ವರ್ಷದಲ್ಲಿ ದೇಶದ ಸುಧಾರಣೆ ಕಾರ್ಯಕ್ಷಮತೆ ಪರಿವರ್ತನೆಗಾಗಿ ನಾವು ಶ್ರಮಿಸಿದ್ದೇವೆ.  ದೇಶದ ಅಭಿವೃದ್ದಿಯ ವೇಗ ಮುಖ್ಯ ಆಗುತ್ತದೆ.  ಭಯೋತ್ಪಾದನೆಯನ್ನ ನಾವು ಈಗ ಮಟ್ಟ ಹಾಕಿದ್ದೇವೆ. ಜಮ್ಮುಕಾಶ್ಮೀರದ ಜನ ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದರು . ಈಗ ಅಲ್ಲಿನ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಿದ್ದೇವೆ.  ಭಯೋತ್ಪಾದಕರು ದೇಶದ ಹೃದಯಕ್ಕೆ ಗುಂಡು ಹೊಡೆಯುತ್ತಿದ್ದರು. ಈಗ ಭಯೋತ್ಪಾದನೆಯನ್ನ ಮಟ್ಟ ಹಾಕಿದ್ದೇವೆ. ಮುಸ್ಲಿಂ ಸಮುದಾಯದಲ್ಲಿ ತ್ರಿವಳಿ ತಲಾಖ್ ಕಾನೂನು ಇತ್ತು. ಅದನ್ನ ನಾವು ತೆಗೆದು ಹಾಕಿದ್ದೇವೆ ಎಂದರು.

ತಂತ್ರಜ್ಞಾನವುಳ್ಳ ಸಂಸತ್ ನಿರ್ಮಾಣ ಮಾಡಿದ್ದೇವೆ. ನಮ್ಮ ಅವಧಿಯಲ್ಲಿ ಸಾಕಷ್ಟುಅಭಿವೃದ್ದಿಯಾಗಿದೆ. ಹೊಸ ಸಂಸತ್ ಭವನದಲ್ಲಿ ನಾರಿಶಕ್ತಿ ಬಿಲ್ ಅಂಗೀಕಾರವಾಗಿದೆ. ಸೈಬರ್ ಶಕ್ತಿ,  ಸ್ಪೇಸ್ ಶಕ್ತಿಯಿಂದ ದೊಡ್ಡಕ್ರಾಂತಿಯಾಗಿದೆ.  ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಸಾಧನೆಯಾಗಿದೆ.  ದೇಶದ ಯುವಕರು ತುಂಬಾ ಪ್ರತಿಭಾವಂತರಿದ್ದಾರೆ. ಸಂಶೋಧನೆ, ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

Key words: Important -development – country- Confidence – NDA –alliance- again – PM Modi.