ಸಿ.ಪಿ ಯೋಗೇಶ್ವರ್ ಗೆ ಮಂತ್ರಿಸ್ಥಾನ ನೀಡಿದ್ರೆ ಬಿಜೆಪಿಯಲ್ಲಿ ಅಸಮತೋಲನ ಮುಂದುವರೆಯುತ್ತೆ-  ಬಿಜೆಪಿ ಶಾಸಕ ರಾಜುಗೌಡ…

ಬೆಂಗಳೂರು,ಫೆ,3,2020(www.justkannada.in): ಮುಖ್ಯಮಂತ್ರಿ ಯಡಿಯೂರಪ್ಪ ಫೆಭ್ರವರಿ 6 ರಂದು ತಮ್ಮ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ಇದಕ್ಕೂ ಮೊದಲೇ ರಾಜ್ಯಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾಹಿತಿ ಮಾಹಿತಿ ಲಭ್ಯವಾದ ಹಿನ್ನೆಲೆ ಇದಕ್ಕೆ ಮೂಲ ಬಿಜೆಪಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಶಾಸಕರ ಭವನದಲ್ಲಿ ಮೂಲ ಬಿಜೆಪಿಗರು ಸಭೆ ನಡೆಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಮುರುಗೇಶ್ ನಿರಾಣಿ ದತ್ತಾತ್ರೆಯ ಪಾಟೀಲ್ ರೇವೋರ್, ಎಂಪಿ ರೇಣುಕಾಚಾರ್ಯ, ರಾಜುಗೌಡ,  ಪರಣ್ಣ ಮನಹಳ್ಳಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಸೋತವರಿಗೂ ಅವಕಾಶ ನೀಡುವುದಾದರೇ ಎಂಟಿಬಿ ಮತ್ತು ಹೆಚ್ ವಿಶ್ವನಾಥ್ ಗೆ ಕೊಡಲಿ. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಸಭೆಯಲ್ಲಿ ಆಗ್ರಹಿಸಿದ್ದಾರೆ.

ಇನ್ನು ಸಿಪಿ ಯೋಗೇಶ್ವರ್ ಗೆ ಮಂತ್ರಿ ಸ್ಥಾನ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ರಾಜುಗೌಡ, ಯೋಗೇಶ್ವರ್ ಗೆ ಮಂತ್ರಿ ಸ್ಥಾನ ನೀಡಿದ್ರೆ ಬಿಜೆಪಿಯಲ್ಲಿ ಅಸಮತೋಲನ ಮುಂದುವರೆಯಲಿದೆ.   ಪ್ರತ್ಯೇಕ ರಾಜ್ಯದ ಕೂಗು ಬಂದಾಗ ಸುಮ್ಮನಿರುತ್ತೀರಿ. ಈಗ ರಾಜಕೀಯ ಅಧಿಕಾರ ಸಿಗಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.

ಸೋತಿರುವ 120 ಜನ ಇದ್ದಾರೆ ಅವರು ಏನುಮಾಡ್ತಾರೆ..?  ಕೊಟ್ಟವರಿಗೆ ಅವಕಾಶ ಕೊಡುವುದು ಸರಿಯಲ್ಲ. ಕರಾವಳಿ, ಮೈಸೂರು, ಹೈದರಾಬಾದ್ ಕರ್ನಾಟಕಕ್ಕೆ ಸಚಿವ ಸ್ಥಾನ ನೀಡಿಲ್ಲ. ಹೈದರಾಬಾದ್ –ಕರ್ನಾಟಕ ಭಾಗದವರಿಗೂ ಸಚಿವ ಸ್ಥಾನ ಕೊಡಿ ಎಂದು ರಾಜುಗೌಡ ಆಗ್ರಹಿಸಿದರು.

Key words: imbalance – BJP continues – CP Yogeshwar-ministry- BJP MLA -Raju Gowda