ನಾಳೆ ಸಂಜೆ 4 ಗಂಟೆಗೆ ಸಚಿವ ಸಂಪುಟ ಸಭೆ ನಿಗದಿ…    

ಬೆಂಗಳೂರು,ಫೆ,3,2020(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ ವಿದೇಶಿ ಪ್ರವಾಸ, ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ದೆಹಲಿ ಪ್ರವಾಸ ಹೀಗೆ ಹಲವು ಅಡೆತಡೆಗಳಿಂದ ಕಳೆದ ಎರಡು ವಾರಗಳಿಂದ ಮುಂದೂಡಿಕೆಯಾಗಿದ್ದ ಸಚಿವ ಸಂಪುಟ ಸಭೆಗೆ ಸಮಯ ನಿಗದಿಯಾಗಿದೆ.

ನಾಳೆ ಸಂಜೆ 4 ಗಂಟೆಗೆ ವಿಧಾನಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದೆ. ನಾಳಿನ ಸಂಪುಟ ಸಭೆಯಲ್ಲಿ ಮಹತ್ವದ ವಿಚಾರ ಚರ್ಚೆಯಾಗಲಿದೆ. ಸಚಿವ ಸಂಪುಟ ವಿಸ್ತರಣೆ. ಖಾತೆ ಬದಲಾವಣೆ, ರಾಜ್ಯದ ಅಭಿವೃದ್ದಿ ಕುರಿತು  ಹಲವು ವಿಚಾರಗಳು ಚರ್ಚೆಗೆ ಬರಲಿವೆ.

ಸಿಎಂ ಬಿಎಸ್ ಯಡಿಯೂರಪ್ಪ ಜನವರಿ 19 ರಂದು ದಾವೋಸ್ ಗೆ ತೆರಳಿ ಜ.24 ರಂದು ವಾಪಸ್ಸಾಗಿದ್ದರು. ನಂತರ ದೆಹಲಿಗೆ ತೆರಳಿ ಅಮಿತ್ ಶಾ, ಜೆ.ಪಿ ನಡ್ಡಾ ಅವರನ್ನ ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಿ ನಂತರ ರಾಜ್ಯಕ್ಕೆ ವಾಪಸ್ಸಾಗಿದ್ದರು. ಈ ಹಿನ್ನೆಲೆ ಸಚಿವ ಸಂಪುಟ ಸಭೆ ನಡೆದಿರಲಿಲ್ಲ.

Key words: Cabinet -meeting –scheduled- tomorrow-4 pm